ತಿರುವನಂತಪುರ: ಪ್ರಸ್ತುತ ಎರಡು ತಿಂಗಳಿಗೊಮ್ಮೆ ಪಾವತಿಸುವ ವಿದ್ಯುತ್ ಬಿಲ್ ಗಳನ್ನು ತಿಂಗಳಿಗೊಮ್ಮೆ ಮಾಡುವ ಕುರಿತು ಕೆಎಸ್‍ಇಬಿಗೆ ವಿದ್ಯುತ್ ನಿಯಂತ್ರಣ ಆಯೋಗ ಸೂಚನೆ ನೀಡಿಲ್ಲ ಎಂದು ಸಚಿವ ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ.
ಆದರೆ ಇದು ಸಾಧ್ಯವೇ ಎಂಬುದನ್ನು ಕೆಎಸ್‍ಇಬಿ ಪರಿಶೀಲಿಸುತ್ತಿದೆ. ಮೊದಲ ಹಂತದಲ್ಲಿ, ಪೈಲಟ್ ದೊಡ್ಡ ಗ್ರಾಹಕರಿಗೆ ಮಾಸಿಕ ಬಿಲ್ ಮಾಡಲು ಉದ್ದೇಶಿಸಿದ್ದಾರೆ. ನವೀಕರಣದ ಅಂಗವಾಗಿ ಮೂರು ಲಕ್ಷ ಸ್ಮಾರ್ಟ್ ಮೀಟರ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಹಂತವು ಮಾರ್ಚ್ 2026 ರೊಳಗೆ ಪೂರ್ಣಗೊಳ್ಳಲಿದೆ. ಕಳೆದ ಆರ್ಥಿಕ ವರ್ಷದಲ್ಲಿ ಅನ್ಯ ರಾಜ್ಯಗಳಿಂದ 24078 ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿಸಲಾಗಿತ್ತು. ಈ ಉದ್ದೇಶಕ್ಕಾಗಿ 12982.59 ಕೋಟಿ ರೂ.ವೆಚ್ಚವಾಗಿದೆ. ಹಿಂದಿನ ವಷರ್Àಕ್ಕೆ ಹೋಲಿಸಿದರೆ 2432 ಲಕ್ಷ ಯೂನಿಟ್ ಖರೀದಿಸಲಾಗಿದೆ. 1741.97 ಕೋಟಿ ಹೆಚ್ಚುವರಿ ವೆಚ್ಚವಾಗಿದೆ ಎಂದು ಸಚಿವರು ತಿಳಿಸಿದರು.