ಉಪ್ಪಳ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ನ 2023-24 ನೇ ವರ್ಷದ ವಾರ್ಷಿಕ ಮಹಾಸಭೆ ಬ್ಯಾಂಕ್ ಅಧ್ಯಕ್ಷ ಶ್ರೀಧರ ಹೊಳ್ಳ ಅವರ ಅದ್ಯಕ್ಷತೆಯಲ್ಲಿ ಪೈವಳಿಕೆ ಕುಟುಂಬಶ್ರೀ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕ್ ಕಾರ್ಯದರ್ಶಿ ಕೇಶವ ಬಾಯಿಕಟ್ಟೆ ವರದಿ ಮಂಡಿಸಿದರು. ಸಭಾದ್ಯಕ್ಷ ಶ್ರೀಧರ ಹೊಳ್ಳ ಕಯ್ಯಾರು ಅವರು ಬ್ಯಾಂಕ್ ನ ಪ್ರಗತಿಯ ಬಗ್ಗೆ ಸದಸ್ಯರಿಗೆ ತಿಳಿಸಿದರು. ಪ್ರಸ್ತುತ ವರ್ಷದ ಬ್ಯಾಂಕ್ 120 ಕೋಟಿ ರೂ ವ್ಯವಹಾರ ನಡೆಸಿ 36 ಲಕ್ಷ ರೂ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.
ನಿಧನರಾದ ಬ್ಯಾಂಕ್ ನ ಮಾಜಿ ಅಧ್ಯಕ್ಷ ಅಂದುಞÂ್ಞ ಹಾಜಿ ಸಿರಂತ್ತಡ್ಕ, ಮಾಜಿ ನಿರ್ದೇಶಕ ನಾರಾಯಣ ಬೆಳ್ಚಪ್ಪಾಡ ಪಾಂಡ್ಯಡ್ಕ, ಮಾಜಿ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಕಲ್ಲೇಕ್ಕರ ಅವರಿಗೆ ಸಭೆಯು ಶ್ರದ್ದಾಂಜಲಿ ಅರ್ಪಿಸಲಾಯಿತು.ಬ್ಯಾಂಕ್ ನ ನಿರ್ದೇಕರಾದ ಡಾ.ಗಣಪತಿ ಭಟ್ ಕುಂಡೇರಿ, ಅಬ್ದುಲ್ ಅಜೀಜ್ ಕಳಾಯಿ, ಮಾಜಿ ನಿರ್ದೇಶಕರಾದ ತಿರುಮಲೇಶ್ವರ, ಅಬ್ದುಲ್ ರಹಿಮಾನ್ ಮಾಸ್ತರ್, ಮಾಜಿ ಕಾರ್ಯದರ್ಶಿ ಪರಮೇಶ್ವರ ಪೈವಳಿಕೆ ಮಾತನಾಡಿದರು. ಐ.ಸಿ.ಎಂ ಕಣ್ಣೂರು ಇವರ ಪ್ರತಿನಿಧಿ ಅಭಿಲಾಷ್ ಅವರು ಸಹಕಾರಿ ತತ್ವಗಳ ಬಗ್ಗೆ ತರಗತಿ ನಡೆಸಿದರು. ಮಹಾಸಭೆಯಲ್ಲಿ ಬ್ಯಾಂಕ್ ನ ನಿರ್ದೇಕರಾದ ಅಬ್ಬುಸಾಲಿ ಕಳಾಯಿ, ಮಾರ್ಸೆಲ್ ಡಿ ಸೋಜಾ, ಪ್ರಶಾಂತ್ ಕುಮಾರ್, ಆಶಾದೇವಿ, ಪುಷ್ಪಾ ಬಾಯಿಕಟ್ಟೆ, ಬ್ಯಾಂಕ್ ನ ಉಪಾಧ್ಯಕ್ಷರಾದ ಶಾಲಿನಿ ಕುಮಾರಿ, ಸುಂದರ ಜೋಡುಕಲ್ಲು ಭಾಗವಹಿಸಿದ್ದರು. ಬ್ಯಾಂಕ್ ನಿರ್ದೇಶಕ ಅಶ್ವಥ್ ಪೂಜಾರಿ ಲಾಲ್ ಬಾಗ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಕೇಶವ ಬಾಯಿಕಟ್ಟೆ ವಂದಿಸಿದರು.