ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಅನ್ನ ಆಹಾರ ಎಷ್ಟು ಮುಖ್ಯವೋ ಶುಚಿತ್ವ ಕಾಪಾಡಿಕೊಂಡಿರುವುದು ಕೂಡಾ ಅಷ್ಟೇ ಮುಖ್ಯ.ದೈಹಿಕ ಶುಚಿತ್ವ ಕಾಪಾಡಿಕೊಳ್ಳುವ ಸಲುವಾಗಿ ನಿತ್ಯ ಸ್ನಾನ ಮಾಡುವ ಕೆಲಸ ಎಲ್ಲರೂ ಮಾಡುತ್ತಾರೆ. ಅವರವರ ಅಗತ್ಯ ಅನುಕೂಲಕ್ಕೆ ತಕ್ಕಂತೆ ಒಂದು ಬಾರಿ ಅಥವಾ ಎರಡು ಬಾರಿ ಸ್ನಾನ ಮಾಡುತ್ತಾರೆ.ಹಾಗಿದ್ದರೆ ಶುಚಿತ್ವ ಅನ್ನುವುದು ಬರೀ ಸ್ನಾನಕ್ಕೆ ಸೀಮಿತಾನಾ?
ನಾವು ಸ್ನಾನಕ್ಕೆ ಹೋಗುವಾಗ ಟವಲ್ ತೆಗೆದುಕೊಂಡು ಹೋಗುತ್ತೇವೆ.ಹೆಚ್ಚಾಗಿ ಪುರುಷರು ಸ್ನಾನ ಮುಗಿದ ನಂತರ ಟವಲ್ ಅನ್ನು ಸುತ್ತಿಕೊಂಡು ಹೊರ ಬರುವ ಅಭ್ಯಾಸವಿದೆ. ಆದರೆ ಈ ಅಭ್ಯಾಸ ಬಹಳ ಅಪಾಯಕಾರಿ.ಸ್ನಾನ ಮಾಡಿ ರೋಗಗಳನ್ನು ದೂರ ತಳ್ಳಬಹುದು ಎಂದು ನಾವಂದು ಕೊಂಡಿದ್ದರೆ,ಸ್ನಾನದ ನಂತರ ಸುತ್ತಿಕೊಳ್ಳುವ ಟವಲ್ ರೋಗಗಳ ಬಾಯಿಗೆ ನಮ್ಮನ್ನು ದೂಡಿ ಬಿಡಬಹುದು.
:ಟವೆಲ್ ಹೇಗೆ ಅಪಾಯಕಾರಿ ?
ಟವೆಲ್ ಅನ್ನು ಸರಿಯಾಗಿ ಬಳಸದಿದ್ದರೆ ಅದು ಆರೋಗ್ಯಕ್ಕೆ ಅಪಾಯಕಾರಿ.ಸ್ನಾನ ಮುಗಿಸಿಕೊಂಡು ಹೊರ ಬರುವಾಗ ಟವಲ್ ಅನ್ನು ದೇಹಕ್ಕೆ ಅಥವಾ ಕೂದಲಿಗೆ ಸುತ್ತಿಕೊಂಡು ಬರುವ ಅಭ್ಯಾಸ ಬಹುತೇಕ ಮಂದಿಗೆ ಇರುತ್ತದೆ.ಆದರೆ ಇದು ಬಹಳ ಅಪಾಯಕಾರಿ ಎನ್ನುವುದು ಸಂಶೋಧನೆಗಳಿಂದ ಹೊರ ಬಂದಿರುವ ಸತ್ಯ.
ಸ್ನಾನಕ್ಕೆ ಬಳಸುವ ಬಳಸುವ ಟವಲ್ ಬಗ್ಗೆ ತಲೆಕೆಡಿಸಿಕೊಳ್ಳುವವರ ಸಂಖ್ಯೆ ಕಡಿಮೆ. ನಿತ್ಯ ಧರಿಸುವ ಬಟ್ಟೆಗಳನ್ನು ತೊಳೆಯುವಂತೆ ಸಾಮಾನ್ಯವಾಗಿ ಟವಲ್ ಗಳನ್ನು ಪ್ರತಿ ದಿನ ಒಗೆಯುವುದಿಲ್ಲ.ಇದರಿಂದಾಗಿ ಟವಲ್ ನಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ.ಈ ಬ್ಯಾಕ್ಟೀರಿಯಾಗಳು ರೋಗಗಳನ್ನು ಹರಡುತ್ತದೆ. ಈ ಬ್ಯಾಕ್ಟೀರಿಯಾಗಳು ಅತಿಸಾರ ಮತ್ತು ಫುಡ್ ಪೋಯಿಸನ್ ನಂಥಹ ಕಾಯಿಲೆಗಳಿಗೆ ಕಾರಣವಾಗಬಹುದು.
ಟವೆಲ್‌ನಲ್ಲಿ ಬ್ಯಾಕ್ಟೀರಿಯಾ ಹೇಗೆ ಬೆಳೆಯುತ್ತದೆ ? :
ಸ್ನಾನ ಮಾಡುವಾಗಲೆಲ್ಲಾ ದೇಹವನ್ನು ಒರೆಸಿದ ನಂತರ ಟವೆಲ್ ಒದ್ದೆಯಾಗುತ್ತದೆ. ಹಾಗಾಗಿ ಟವಲ್ ನಲ್ಲಿ ತೇವಾಂಶವು ದೀರ್ಘಕಾಲದವರೆಗೆ ಉಳಿಯುತ್ತದೆ.ಇದು ಟವಲ್ ನಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಅದೇ ಟವಲ್ ಅನ್ನು ನಾವು ಮತ್ತೆ ಮತ್ತೆ ಬಳಸಿದಾಗ,ಈ ಬ್ಯಾಕ್ಟೀರಿಯಾಗಳು ನಿಮ್ಮ ದೇಹವನ್ನು ಪ್ರವೇಶಿಸಿ ರೋಗಗಳು ಹರಡಲು ಕಾರಣವಾಗುತ್ತವೆ.
ಹಾಗಿದ್ದರೆ ರೋಗ ಹರಡದಂತೆ ಏನು ಮಾಡಬೇಕು ? :
ಟವೆಲ್ ಮೂಲಕ ಹರಡುವ ರೋಗಗಳನ್ನು ತಪ್ಪಿಸಬೇಕಾದರೆ ಅದನ್ನು ಆಗಾಗ ಸರಿಯಾಗಿ ಒಗೆಯಬೇಕು.ಹೀಗೆ ಮಾಡಿದಾಗ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ.ಪ್ರತಿ ಬಾರಿ ಸ್ನಾನದ ನಂತರ ಟವೆಲ್ ನಿಂದ ಮೈ ಅಥವಾ ಕೂದಲು ಒರೆಸಿದ ನಂತರ ಟವಲ್ ಅನ್ನು ಬಿಸಿಲಿನಲ್ಲಿ ಒಣಗಲು ಹಾಕಬೇಕು. ಹೀಗಾದಾಗ ಸೂರ್ಯನ ಶಾಖಕ್ಕೆ ಟವಲ್ ನಲ್ಲಿರುವ ತೇವಾಂಶ ಒಣಗಿ ಹೋಗುತ್ತದೆ.ರೋಗಾಣುಗಳು ಹುಟ್ಟಿಕೊಳ್ಳುವುದಿಲ್ಲ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.)