ಬದಿಯಡ್ಕ : ಶಿವಳ್ಳಿ ಬ್ರಾಹ್ಮಣ ಸಭಾದ 2024-25ನೇ ಸಾಲಿನ ಕಾಸರಗೋಡು ಜಿಲ್ಲಾ ವಾರ್ಷಿಕ ಮಹಾಸಭೆ ಮತ್ತು ಕ್ರೀಡಾ, ಸಾಂಸ್ಕøತಿಕೋತ್ಸವವು ಎಡನೀರು ಮಠದಲ್ಲಿ 2024 ನವೆಂಬರ್ 30 ಹಾಗೂ ಡಿಸೆಂಬರ್ 1ರಂದು ಜರುಗಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸೀತಾಂಗೋಳಿಯ ಶಿವಳ್ಳಿ ಭವನದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಉಔಟISIಆಖU.
ನ.30ರಂದು ಬೆಳಗ್ಗೆ 9ಕ್ಕೆ ಶಿವಳ್ಳಿ ಬ್ರಾಹ್ಮಣ ಸಭಾದ ಏತಡ್ಕ ವಲಯ ಅಧ್ಯಕ್ಷ ಶ್ರೀನಿವಾಸ ಅಮ್ಮಣ್ಣಾಯ ಧ್ವಜಾರೋಹಣ ಮಾಡುವರು. ಬಳಿಕ ಸಮುದಾಯದ ಸದಸ್ಯರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಡಿ.1ರಂದು ಬೆಳಗ್ಗೆ 10.30ಕ್ಕೆ ವಾರ್ಷಿಕ ಮಹಾಸಭೆ ನಡೆಯಲಿದೆ. 11.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಮಂಜುನಾಥ ಟಿ ಕೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಸುರತ್ಕಲ್ಲಿನ ಅಗರಿ ರಾಘವೇಂದ್ರ ರಾವ್ ಹಾಗೂ ಪ್ರಾಧ್ಯಾಪಕಿ ಡಾ. ಸುಭಾಷಿಣಿ ಶ್ರೀವತ್ಸ ಭಾಗವಹಿಸುವರು. ಸಭಾದ ಜಿಲ್ಲಾ ಕಾರ್ಯದರ್ಶಿ ಚೇತನ್ ರಾಮ್ ನೂರಿತ್ತಾಯ, ವಲಯ ಕಾರ್ಯದರ್ಶಿ ಅರುಣ್ ಕುಮಾರ ಕಂಡೆತ್ತೋಡಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಡಾ. ಯು ಬಿ ಕುಣಿಕುಳ್ಳಾಯ, ಡಾ.ಕೃಷ್ಣ ಕುಮಾರಿ ನೀಡುವ ವಿದ್ಯಾರ್ಥಿ ವೇತನದ ವಿತರಣೆ ನಡೆಯಲಿದೆ. ಕ್ರೀಡೋತ್ಸವದ ಅಂಗವಾಗಿ ನ.3ರಂದು ಆಟೋಟ ಸ್ಪರ್ಧೆಗಳು, ಪೆನ್ಸಿಲ್ ಡ್ರಾಯಿಂಗ್ ಸ್ಪರ್ಧೆ, ನ.24ರಂದು ಚೆಸ್ ಮತ್ತು ಕೇರಂ ಸ್ಪರ್ಧೆ, ಡಿ.8ರಂದು ಕ್ರಿಕೆಟ್ ಪಂದ್ಯವು ಎಡನೀರು ಮಠದ ಪರಿಸರದಲ್ಲಿ ನಡೆಯಲಿದೆ. ನ.10ರಂದು ಶಟಲ್ ಬ್ಯಾಡ್ಮಿಂಟನ್ ಪಂದ್ಯವು ಕರ್ಮಂತೋಡಿಯಲ್ಲಿ ನಡೆಯಲಿದೆ. ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಿವಳ್ಳಿ ಬ್ರಾಹ್ಮಣ ಸಭಾದ ಏತಡ್ಕ ವಲಯ ಅಧ್ಯಕ್ಷ ಶ್ರೀನಿವಾಸ ಅಮ್ಮಣ್ಣಾಯ ಪಾವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.