ಕಣ್ಣೂರು: ಪ್ರಕರಣದಲ್ಲಿ ಕಣ್ಣೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಿ.ಪಿ.ದಿವ್ಯಾ ಅವರನ್ನು ಬಂಧಿಸಿರುವುದು ಸಮಾಧಾನ ತಂದಿದೆ ಎಂದು ಎಡಿಎಂ ನವೀನ್ ಬಾಬು ಅವರ ಪತ್ನಿ ಮಂಜುಷಾ ಪೆÇಲೀಸರ ತನಿಖೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಲಶ್ಯೇರಿ ಪ್ರಧಾನ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪೋಲೀಸರೊಂದಿಗಿನ ಒಪ್ಪಂದದಂತೆ ದಿವ್ಯಾ ಕಣ್ಣೂರು ಕಣ್ಣಪುರಂಗೆ ತಲುಪಲಿರುವ ಭರವಸೆಯಿದೆ ಎಂದು ಮಂಜುಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೇ ವೇಳೆ ಪೋಲೀಸ್ ಆಯುಕ್ತರು ಕ್ರಮದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟ್ಟಪಡಿಸಿದ್ದಾರೆ. ದಿವ್ಯಾ ಅವರ ಮೇಲೆ ನಿರಂತರ ಪೋಲೀಸ್ ನಿಗಾ ಇರಿಸಲಾಗಿದ್ದು, ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ಬಂಧನ ವಿಳಂಬವಾಗಿತ್ತು ಎಂದು ಆಯುಕ್ತರು ಪ್ರತಿಕ್ರಿಯಿಸಿದ್ದಾರೆ. ಪೋಲೀಸ್ ವರದಿಯಲ್ಲಿರುವ ವಿಷಯಗಳ ಬಗ್ಗೆ ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ವಾದ ಮಂಡಿಸಿತು. ಇದನ್ನು ಪರಿಗಣಿಸಿ ನಿರೀಕ್ಷಣಾ ಜಾಮೀನು ತಿರಸ್ಕರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.