ಪೆರ್ಲ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ದುರಾಡಳಿತದಿಂದ ನಿರುದ್ಯೋಗಿಯಾಗಿರುವ ಹತಾಶ ಯುವಕ ಯುವತಿಯ ಪೈಕಿ ಯುವತಿಯೊಬ್ಬಳಿಗೆ ಸುಳ್ಳು ಭರವಸೆಗಳನ್ನು ನೀಡಿ ಹಣ ವಂಚಿಸಿರುವುದು ಆಘಾತಕಾರಿಯಾಗಿದೆ. ಡಿವೈಎಫ್ ಐ ಮುಖಂಡೆ ಮತ್ತು ಶಿಕ್ಷಕಿಯೊಬ್ಬಳು ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ್ದಾರೆ ಎಂಬ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿ ಒತ್ತಾಯಿಸಿದೆ.