ಕಾಸರಗೋಡು: ಹಡಗಿನಲ್ಲಿ ಉದ್ಯೋಗದಲ್ಲಿರುವ ರಾಜಪುರಂ ಅಂಜರಾಯಿಲ್ ನಿವಾಸಿ, ಕೆ.ಎನ್. ಆಂಟನಿ-ಬೀನಾ ದಂಪತಿ ಪುತ್ರ ಆಲ್ಬರ್ಟ್ ಆಂಟನಿ(22) ನಾಪತ್ತೆಯಾಗಿರುವ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಆಲ್ಬರ್ಟ್ ಆಂಟನಿ ಅವರು ಸಿನರ್ಜ್ ಮ್ಯಾರಿಟೈಮ್ ಕಂಪೆನಿಯ ಎಂ.ವಿ ಕ್ರೂ ಕಾಂಡ್ರಾಡ್ ಹೆಸರಿನ ಸರಕು ಸಾಗಾಟದ ಹಡಗಿನಲ್ಲಿ ಉದ್ಯೋಗಿಯಾಗಿದ್ದಾರೆ. ಕೊಲಂಬೋದಿಂದ ಹಾಂಕಾಂಗ್ ಮೂಲಕ ಬ್ರೆಜಿಲ್‍ಗೆ ತೆರಳುವ ಹಾದಿ ಮಧ್ಯೆ ಆಲ್ಬರ್ಟ್ ಆಂಟನಿ ನಾಪತ್ತೆಯಾಗಿದ್ದರು. ಆಲ್ಬರ್ಟ್ ಆಂಟನಿ ಪತ್ತೆಗಾಗಿ ಹುಡುಕಾಟ ನಡೆದುಬರುತ್ತಿರುವುದಾಗಿ ಅವರ ಮನೆಯವರಿಗೆ ಮಾಹಿತಿ ಲಭಿಸಿದೆ. ಆಲ್ಬರ್ಟ್ ಆಂಟನಿ ಪತ್ತೆಗಾಗಿ ಸಿಎಂ ಪಿಣರಾಯಿ ವಿಜಯನ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಕೇಂದ್ರ ಸಚಿವರಾದ ಸುರೇಶ್‍ಗೋಪಿ, ಜಾರ್ಜ್ ಕುರಿಯನ್ ಅವರಿಗೆ ಮನೆಯವರು ಮನವಿ ಸಲ್ಲಿಸಿದ್ದಾರೆ.