ಮಂಜೇಶ್ವರ: ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಳದ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿಭಾಗದ ಪೆಟ್ರೋಲ್ ಲೀಡರ್ಸ್ ಟ್ರೈನಿಂಗ್ ಕ್ಯಾಂಪ್‍ನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಭಟ್ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು. ಮಂಜೇಶ್ವರದ ನರಸಿಂಹ ನಾಯಕ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಿ.ಸಿ. ಗೈಡ್ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಕುಮಾರಿ ಕ್ಯಾಂಪ್ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶ್ರೀಮತ್ ಅನಂತೇಶ್ವರ ದೇವಳದ ಅಧ್ಯಕ್ಷ ಟಿ.ಗಣಪತಿ ಪೈ, ಶಾಲಾ ಪ್ರಬಂಧಕ ಪ್ರಶಾಂತ್ ಹೆಗ್ಡೆ, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನ ಮೊಂತೇರೋ, ಎಸ್.ಎ.ಟಿ. ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಸುಮನ ಐಲ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಬಶೀರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಮಂಜೇಶ್ವರದ ಲೋಕಲ್ ಅಸೋಸಿಯೇಶÀನ್ ಅಧ್ಯಕ್ಷ ಮಹಾಲಿಂಗ ಭಟ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸುರೇಖ ಮಲ್ಯ ಸ್ವಾಗತಿಸಿ, ಶಿಕ್ಷಕಿ ಮಧುರಾ ವಂದಿಸಿದರು. ಶಿಕ್ಷಕಿ ಭವ್ಯಶ್ರೀ ರೈ ವಂದಿಸಿದರು. ಮೂರು ದಿನಗಳಲ್ಲಿ ನಡೆದ ಶಿಬಿರದಲ್ಲಿ ಮಂಜೇಶ್ವರ ಉಪಜಿಲ್ಲೆಯ 250ಕ್ಕೂ ಹೆಚ್ಚು ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.