ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಶನಿವಾರ ಶುಭಾಶಯ ಕೋರಿ, ಆರ್‌ಎಸ್‌ಎಸ್ ದೇಶದ ಸೇವೆಗೆ ಮೀಸಲಾಗಿದೆ ಎಂದು ಹೇಳಿದ್ದಾರೆ.
ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಶನಿವಾರ ಶುಭಾಶಯ ಕೋರಿ, ಆರ್‌ಎಸ್‌ಎಸ್ ದೇಶದ ಸೇವೆಗೆ ಮೀಸಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ವಿಜಯದಶಮಿ ಕುರಿತು ಮಾಡಿದ ಭಾಷಣದ ಲಿಂಕ್ ಅನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿರುವ ಮೋದಿ, 'ಇದನ್ನು ಕೇಳಲೇಬೇಕು' ಎಂದಿದ್ದಾರೆ.
'ಬಿಜೆಪಿ ಸೇರುವ ಮೊದಲು ನಾನು ಆರ್‌ಎಸ್‌ಎಸ್ ಪ್ರಚಾರಕನಾಗಿದ್ದೆ. ವಿಕಾಸಿತ ಭಾರತವನ್ನು ಸಾಧಿಸಲು ಮತ್ತು ಭಾರತ ಮಾತೆಯ ಸೇವೆ ಮಾಡಲು ಆರ್‌ಎಸ್‌ಎಸ್ ಪ್ರತಿ ಪೀಳಿಗೆಯನ್ನು ಪ್ರೇರೆಪಿಸುತ್ತದೆ' ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
1925ರಲ್ಲಿ ರಚನೆಯಾದ ಆರ್‌ಎಸ್‌ಎಸ್ ಬಿಜೆಪಿಯ ಒಂದು ಸೈದಾಂತಿಕ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದ್ದು, ಸಂಘಟನೆ ಬೆಳವಣಿಗೆಯಲ್ಲಿ ಅದರ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ.