ತಿರುವನಂತಪುರಂ: ವಯನಾಡ್, ಪಾಲಕ್ಕಾಡ್ ಮತ್ತು ಚೇಲಕ್ಕರ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಿಗೇ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಪಾಲಕ್ಕಾಡ್ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಹುಲ್ ಮಂಗ್ ಕೂಟ್ ಹಾಗೂ ಚೇಲಕ್ಕರದಲ್ಲಿ ರಮ್ಯಾ ಹರಿದಾಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ನಾಯಕತ್ವ ಹೈಕಮಾಂಡ್‍ಗೆ ನೀಡಿರುವ ಪಟ್ಟಿಯಲ್ಲಿ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಅಭ್ಯರ್ಥಿಯನ್ನಾಗಿ ಈಗಾಗಲೇ ನಿರ್ಧರಿಸಲಾಗಿದೆ.
ಇದೇ ವೇಳೆ ಚೇಲಕ್ಕರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಯು.ಆರ್.ಪ್ರದೀಪ್ ಕಣಕ್ಕಿಳಿಯುವ ಸೂಚನೆಗಳಿವೆ. ಪಾಲಕ್ಕಾಡ್ ಬಿನುಮೋಲ್ ಜೊತೆಗೆ ಸಿಪಿಎಂ ಇತರರನ್ನು ಪರಿಗಣಿಸುತ್ತಿದೆ. ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲವೂ ಇದೆ.
ಮೂರು ಕ್ಷೇತ್ರಗಳಲ್ಲಿ ತಲಾ ಮೂರು ಹೆಸರನ್ನು ಕೇಂದ್ರ ನಾಯಕತ್ವಕ್ಕೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.