ಕಾಸರಗೋಡು: ಪಡನ್ನ ಅಳಿತ್ತಲದಲ್ಲಿ ಮೀನುಗಾರಿಕಾ ದೋಣಿ ಮಗುಚಿ ಓರ್ವ ಮೃತಪಟ್ಟಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ತೇಜಸ್ವಿನಿ ನದಿಯು ಸಮುದ್ರವನ್ನು ಸೇರುವ ಸ್ಥಳದಲ್ಲಿ ಅವಘಡ ನಡೆದಿದೆ.
ಉಬ್ಬರವಿಳಿತ ಮತ್ತು ಗಾಳಿಯಿಂದಾಗಿ ಅವಘಡ ಸಂಭವಿಸಿದೆ. ದೋಣಿಯಲ್ಲಿ 37 ಮಂದಿ ಇದ್ದರು. ಅವರಲ್ಲಿ ಹೆಚ್ಚಿನವರು ಅನ್ಯರಾಜ್ಯ ಕಾರ್ಮಿಕರೆಂದು ತಿಳಿದುಬಂದಿದೆ.
ಪಡನ್ನ ಕಡಲತೀರದಲ್ಲಿ ಮೀನುಗಾರಿಕೆ ಮುಗಿಸಿ ಹಿಂತಿರುಗುತ್ತಿದ್ದ ‘ಇಂಡಿಯನ್’ ಹೆಸರಿನ ಬೋಟ್ ಅಪಘಾತಕ್ಕೀಡಾಗಿದೆ. .ಅಪಘಾತದಲ್ಲಿ ಗಾಯಗೊಂಡ ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.