HEALTH TIPS

ಮಾನವ-ವನ್ಯಜೀವಿ ಸಂಘಷವನ್ನು ತಗ್ಗಿಸಲು ವಿಶೇಷ ಪರಿಗಣನೆ; ಸಚಿವ ಎಕೆ ಶಶೀಂದ್ರನ್

ಕಾಸರಗೋಡು: ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ನಿವಾರಿಸಲು ವಿಶೇಷ ಗಮನ ನೀಡಲಾಗುತ್ತಿದೆ ಮತ್ತು ಗುಡ್ಡಗಾಡು ಪ್ರದೇಶದ ರೈತರೊಂದಿಗೆ ಅರಣ್ಯ ಇಲಾಖೆ ಮತ್ತು ಸರ್ಕಾರವು ಜೊತೆಯಾಗಿ ಕೆಲಸ ಮಾಡುತ್ತಿದೆ ಎಂದು ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದರು.

ಅರಣ್ಯ ವನಶ್ರೀ ಕಾಂಪ್ಲೆಕ್ಸ್‍ನಲ್ಲಿ ನಬಾರ್ಡ್ ಯೋಜನೆಯಡಿ ನಿರ್ಮಿಸಲಾದ ಕಾಸರಗೋಡು ಪ್ಲೈಯಿಂಗ್ ಸ್ಕ್ಯಾಡ್ ರೇಂಜ್ ಫಾರೆಸ್ಟ್ ಆಫೀಸ್ ಕಾಂಪ್ಲೆಕ್ಸ್ ಅನ್ನು ಆನ್‍ಲೈನ್‍ನಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ರಾಜ್ಯದಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿಯ ಆಧಾರದ ಮೇಲೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.


ಈ ಯೋಜನೆಯಲ್ಲಿ ಸೇರಿಸಿ ಕಾರಡ್ಕ ಬ್ಲಾಕ್ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಸಹಯೋಗದಲ್ಲಿ 22 ಕಿ.ಮೀ ಸೋಲಾರ್ ಹ್ಯಾಂಗಿಂಗ್ ಬೇಲಿ ಮತ್ತು ಆನೆಗಳ ಮೇಲೆ ನಿಗಾ ಇಡಲು ಪುಲಿಪರಂಬಿಲ್ ನಲ್ಲಿ ಎಐ ಕ್ಯಾಮರಾ ಅಳವಡಿಸಲಾಗಿದೆ. ಕಾಞಂಗಾಡ್ ಮತ್ತು ತ್ರಿಕರಿಪುರ ಕ್ಷೇತ್ರಗಳಲ್ಲಿ ವನ್ಯಜೀವಿ ಸಂಘರ್ಷಗಳನ್ನು ತಗ್ಗಿಸಲು 32 ಕಿಮೀ ಸೋಲಾರ್ ಹ್ಯಾಂಗಿಂಗ್ ಬೇಲಿ ನಿರ್ಮಾಣ ಪ್ರಗತಿಯಲ್ಲಿದೆ. ಹುಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆತಂಕ ತಪ್ಪಿಸಲು ಮುಳಿಯಾರಲ್ಲಿ ಬೋನು ನಿರ್ಮಿಸಿ ಹುಲಿ ಹಿಡಿಯುವ ಕಾರ್ಯಾಚರಣೆ ನಡೆಸಲಾಗುವುದು.  ಜಿಲ್ಲೆಯ ಪಳ್ಳಂ ಮ್ಯಾಂಗ್ರೋವ್ ಮೀಸಲು ಪ್ರದೇಶದಲ್ಲಿ ನಗರ ಅರಣ್ಯ ಯೋಜನೆ ಅಂತಿಮ ಹಂತದಲ್ಲಿದೆ ಎಂದು ಸಚಿವರು ಹೇಳಿದರು.

105 ಹೆಕ್ಟೇರ್ ಅಕೇಶಿಯಾ-ಮ್ಯಾಂಜಿಯಂ ತೋಟಗಳನ್ನು ಕತ್ತರಿಸಿ ಪರಿಸರ ಸ್ನೇಹಿ ಹಣ್ಣಿನ ಮರಗಳನ್ನು ಬೆಳೆಸಲಾಗುವುದು. ಶಿಕ್ಷಣ ಅರಣ್ಯ ಮತ್ತು ಬಾಲ ಅರಣ್ಯ ಯೋಜನೆಗಳು ನಡೆಯುತ್ತಿವೆ. 2023-24ನೇ ಸಾಲಿನಲ್ಲಿ ಈ ವಲಯದಲ್ಲಿ ಬಂದಿದ್ದ  504 ಅರ್ಜಿಗಳ ಪೈಕಿ 106 ಕೋಟಿ ರೂ.ನಷ್ಟ ಪರಿಹಾರ ಹಾಗೂ 2024ರ ಜುಲೈವರೆಗೆ ಬಂದ 177 ಅರ್ಜಿಗಳ ಪೈಕಿ 23.58 ಲಕ್ಷ ರೂ.ನಷ್ಟ ಪರಿಹಾರ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.


ಇಲಾಖೆಗೆ ಬರುವ ದೂರುಗಳ ಪರಿಶೀಲನೆ ಮತ್ತು ಸಕಾಲಿಕ ತನಿಖೆ, ಅರಣ್ಯ ಸಂರಕ್ಷಣಾ ಚಟುವಟಿಕೆಗಳು, ರಹಸ್ಯ ಗುಪ್ತಚರ ಸಂಗ್ರಹಣೆ ಇತ್ಯಾದಿಗಳನ್ನು ನಡೆಸುವುದು ಪ್ಲೈಯಿಂಗ್ ಸ್ಕ್ಯಾಡ್‍ನ ಕಾರ್ಯವಾಗಿದೆ. ನೂತನ ಕಚೇರಿ ಕಟ್ಟಡ ಮತ್ತು ವಸತಿ ನಿಲಯದ ಸೌಲಭ್ಯಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳು ಆಧುನಿಕ ಸೌಲಭ್ಯಗಳೊಂದಿಗೆ ಉತ್ತಮವಾದ ಕಚೇರಿ ವಾತಾವರಣವನ್ನು ಬಳಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಶಾಸಕರು ಹೇಳಿದರು. ಇಲ್ಲಿ ಉದ್ಘಾಟನೆಗೊಳ್ಳುತ್ತಿರುವ ಕಟ್ಟಡ ಕಾಸರಗೋಡು ಮೂಲಸೌಕರ್ಯ ಅಭಿವೃದ್ಧಿಗೆ ಚಿಂತನೆ ನಡೆಸಿದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ ಎಂದರು.

ಕೆ. ಇ.ಎಲ್ ಕೊಚ್ಚಿ ವ್ಯವಸ್ಥಾಪಕ ನಿರ್ದೇಶಕ ಕರ್ನಲ್ ಶಾಜಿ ಎಂ.ವರ್ಗೀಸ್ ವರದಿ ಮಂಡಿಸಿದರು. ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ. ಎ. ಸೈಮಾ, ನಬಾರ್ಡ್ ಡಿ.ಡಿ.ಎಂ. ಕೆ.ಎಸ್.ಶಾನವಾಸ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಪಿ.ವಿ.ಕುಂಞಂಬು, ಬಿಜು ಉಣ್ಣಿತ್ತಾನ್,  ಕರೀಂ ಚಂದೇರಾ, ಕೆದಪ್ರಂ ಕೃಷ್ಣನ್ ನಂಬಿಯಾರ್, ಸಿ.ಎಂ.ಎ ಜಲೀಲ್, ಅಹ್ಮದಲಿ ಕುಂಬಳೆ, ಸಿದ್ದಿಕ್ ಕೊಡ್ಯಮೆ, ವಿ.ಕೆ.ರಮೇಶ, ಸಾಮಾಜಿಕ ಅರಣ್ಯ ಹೊಸದುರ್ಗ ವಲಯ ಅರಣ್ಯಾಧಿಕಾರಿ ಟಿ. ಸೊಲೊಮನ್ ಥಾಮಸ್ ಜಾರ್ಜ್, ಕಾಸರಗೋಡು ವಲಯ ಅರಣ್ಯಾಧಿಕಾರಿ ಸಿ.ವಿ.ವಿನೋದ್ ಕುಮಾರ್, ಕಾಸರಗೋಡು ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಕೆ. ಗಿರೀಶ್, ಪರಪ್ಪ ಸರ್ಕಾರಿ ಮರದ ಡಿಪೋ ಅಧಿಕಾರಿ ಕೆ. ಇ ಬಿಜುಮೋನ್, ಕೆ.ಎಫ್.ವಿ.ಎಸ್.ಎ. ಜಿಲ್ಲಾಧ್ಯಕ್ಷ ಕೆ.ಎನ್.ರಮೇಶನ್ ಮಾತನಾಡಿದರು. ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಕೆ.ಅಶ್ರಫ್ ಸ್ವಾಗತಿಸಿ, ಕಾಸರಗೋಡು ಪ್ಲೈಯಿಂಗ್ ಸ್ಕ್ಯಾಡ್ ರೇಂಜ್ ಫಾರೆಸ್ಟ್ ಆಫೀಸರ್ ವಿ. ರತೀಶನ್ ವಂದಿಸಿದರು.

ರೇಂಜ್ ಆಫೀಸ್ ಕಟ್ಟಡ, ಫಾಮ್ರ್ಯಾಟರ್ ಮತ್ತು ಕ್ವಾರ್ಟರ್ಸ್ ಕಟ್ಟಡಕ್ಕೆ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿ ಸೇರಿದಂತೆ 123 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಒಟ್ಟು ವಿಸ್ತೀರ್ಣ 254.23 ಚ.ಮೀ., ಎರಡು ಅಂತಸ್ತಿನ ಕಾಂಕ್ರೀಟ್ ಕಂಬಗಳು ಮತ್ತು ತೊಲೆಗಳು ಸೇರಿದಂತೆ  ಕಚೇರಿ ಸಂಕೀರ್ಣ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿ ಕಚೇರಿ ಮತ್ತು ಮೊದಲ ಮಹಡಿಯಲ್ಲಿ ವಸತಿ ನಿಲಯವಿಎ. ಒಂದು ಅಂತಸ್ತಿನಲ್ಲಿ 3ವಸತಿ ಕೊಠಡಿಗಳಿವೆ. 84.22 ಚ.ಮೀ. ಪ್ರದೇಶದಲ್ಲಿ ನಿರ್ಮಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries