ಕಾಸರಗೋಡು: ಜಲಶಕ್ತಿ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಅಂತರ್ಜಲ ಸಂರಕ್ಷಣೆ ಮತ್ತು ಪೆÇೀಷಣೆಗಾಗಿ ಜಿಲ್ಲಾಡಳಿತದ ಕಾರ್ಯಚಟುವಟಿಕೆಗಳ ಬಗ್ಗೆ ಕೇಂದ್ರ ತಂಡ ಅವಲೋಕನ ನಡೆಸಿತು. ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಲಶಕ್ತಿ ಅಭಿಯಾನ ಸಭೆಯನ್ನು ಆಯೋಜಿಸಲಾಗಿತ್ತು.
ಜಲಶಕ್ತಿ ಆಯೋಗದ ಕೇಂದ್ರ ತಂಡದ ಮುಖ್ಯಸ್ಥ, ನೋಯ್ಡಾ ವಿಶೇಷ ಆರ್ಥಿಕ ವಲಯ ಅಭಿವೃದ್ಧಿ ಆಯುಕ್ತ ಬಿಪಿನ್ ಮೆನನ್ ಜಲಶಕ್ತಿ ಕೇಂದ್ರವನ್ನು ಉದ್ಘಾಟಿಸಿದರು. ಕೇಂದ್ರ ಪ್ರತಿನಿಧಿ ವಿಜ್ಞಾನಿ ಕೆ. ಅನಿಶಾ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮೊದಲಾದವರು ಪಾಲ್ಗೊಂಡಿದ್ದರು. ಈ ಸಂದರ್ಭ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮತ್ತು ತಂಡದವರು ಅಂತರ್ಜಲ ಸಂರಕ್ಷಣೆ ಮತ್ತು ಪೆÇೀಷಣೆಗಾಗಿ ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದರು. ಜಿಲ್ಲೆಯಲ್ಲಿ ಅಂತರ್ಜಲ ಸಂರಕ್ಷಣೆ ಹಾಗೂ ಜಲಮೂಲಗಳ ರಕ್ಷಣೆ ಬಗ್ಗೆ ಚರ್ಚಿಸಲಾಯಿತು. ಜಲಶಕ್ತಿ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಭೂಗರ್ಭ ಜಲ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಅರುಣ್ ದಾಸ್ ಅವರು ಜಲಸಂರಕ್ಷಣೆಗಾಗಿ ನಡೆಸಲಾಗುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು. ಕೇಂದ್ರ ತಂಡದೊಂದಿಗೆ ಜೆಎಸ್‍ಎ ಜಿಲ್ಲಾ ನೋಡಲ್ ಅಧಿಕಾರಿ, ಅಂತರ್ಜಲ ಇಲಾಖೆ ಜಿಲ್ಲಾ ಅಧಿಕಾರಿ , ಸಹಾಯಕ. ಕಾರ್ಯನಿರ್ವಾಹಕಇಂಜಿನಿಯರ್ ಒ.ರತೀಶ್, ಜೂನಿಯರ್ ಹೈಡ್ರೋಜಿಯಾಲಜಿಸ್ಟ್ ಫೈಸಲ್, ನಬಾರ್ಡ್ ಯು.ಇ.ಎ ಶರೋನ್ ವಾಜ್, ಸಿಆರ್‍ಡಿ ಪ್ರತಿನಿಧಿ ಡಾ. ಶಶಿಕುಮಾರ್ ಸಿಪಿ, ಸಿನ್ನರ್ ಐ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮನೋಜ್ ಕುಮಾರ್, ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ.ಟಿ. ಸಂಜೀವ್, ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ಉಪಸ್ಥಿತರಿದ್ದರು.
ಜಲ ಶಕ್ತಿ ಅಭಿಯಾನ-ಕಾಸರಗೋಡು ಜಿಲ್ಲೆಯ ಚಟುವಟಿಕೆಗಳ ಬಗ್ಗೆ ಕೇಂದ್ರ ತಂಡದ ಶ್ಲಾಘನೆ
0
ಅಕ್ಟೋಬರ್ 03, 2024
Tags