HEALTH TIPS

ರೈಲ್ವೆ ನೌಕರರಿಗೆ ಬೋನಸ್: ಸಚಿವ ಅಶ್ವಿನಿ ವೈಷ್ಣವ್

 ವದೆಹಲಿ: ರೈಲ್ವೆ ಇಲಾಖೆಯ 11.72 ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿಗೆ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ ಪಾವತಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಗುರುವಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದಕ್ಕಾಗಿ ₹2,028.57 ಕೋಟಿ ವೆಚ್ಚವಾಗಲಿದೆ.

ಕೇಂದ್ರ ಸಂಪುಟವು ಪ್ರಮುಖ ಬಂದರುಗಳು ಮತ್ತು ಹಡಗುಕಟ್ಟೆ ಕಾರ್ಮಿಕ ಮಂಡಳಿ ನೌಕರರಿಗೆ ಈಗ ಜಾರಿಯಲ್ಲಿ ಇರುವ ಉತ್ಪಾದಕತೆ ಆಧಾರಿತ ಪ್ರತಿಫಲ (ಪಿಎಲ್‌ಆರ್) ಯೋಜನೆಯಲ್ಲಿ 2020-21ರಿಂದ 2025-26ರವರೆಗೆ ಅನ್ವಯವಾಗುವಂತೆ ಬದಲಾವಣೆ ತರುವುದಕ್ಕೆ ಕೂಡ ಒಪ್ಪಿಗೆ ನೀಡಿದೆ.

ಇದರಿಂದಾಗಿ ಪ್ರಮುಖ ಬಂದರು ಪ್ರಾಧಿಕಾರಗಳು ಹಾಗೂ ಹಡಗುಕಟ್ಟೆ ಕಾರ್ಮಿಕ ಮಂಡಳಿಗಳ 20,704 ನೌಕರರಿಗೆ ಪ್ರಯೋಜನ ಆಗಲಿದೆ. ಈ ಬದಲಾವಣೆಗಳಿಂದ ಆಗುವ ಆರ್ಥಿಕ ಹೊರೆಯ ಮೊತ್ತ ಅಂದಾಜು ₹200 ಕೋಟಿ ಇರಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries