ತಿರುವನಂತಪುರಂ: ಪಡಿತರ ಅಂಗಡಿಗಳಿಗೂ ಇಂದು(ಶುಕ್ರವಾರ) ಸಾರ್ವಜನಿಕ ರಜೆ ಅನ್ವಯಿಸುತ್ತದೆ. ಈ ಕುರಿತು ಸಚಿವ ಜಿ.ಆರ್.ಅನಿಲ್ ಮಾಹಿತಿ ನೀಡಿರುವರು.
ಚಿಲ್ಲರೆ ಅಂಗಡಿಗಳ ಮುಂದಿನ ಕೆಲಸದ ದಿನ ಸೋಮವಾರವಾಗಿರುತ್ತದೆ. ಮಹಾನವಮಿಯ ಸಂದರ್ಭದಲ್ಲಿ ರಾಜ್ಯದ ಸಹಕಾರಿ ನಿಬಂಧಕರ ಅಧೀನದಲ್ಲಿರುವ ಎಲ್ಲಾ ಸಹಕಾರಿ ಸಂಘಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ. ಶುಕ್ರವಾರ ಸಹಕಾರಿ ನಿಬಂಧಕರ ಅಧೀನದಲ್ಲಿರುವ ಸಹಕಾರಿ ಬ್ಯಾಂಕ್‍ಗಳಿಗೆ ರಜೆ ಇರುತ್ತದೆ.
ಮಹಾನವಮಿ ನಿಮಿತ್ತ ಸಹಕಾರ ಸಂಘಗಳಿಗೆ ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ಸ್ ಕಾಯ್ದೆಯಡಿ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.