ಇಂಫಾಲ್: ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಪೀಪಲ್ಸ್ ವಾರ್ ಗ್ರೂಪ್‌ನ ಆರು ಉಗ್ರರನ್ನು ಮಣಿಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಇಂಫಾಲ್: ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಪೀಪಲ್ಸ್ ವಾರ್ ಗ್ರೂಪ್‌ನ ಆರು ಉಗ್ರರನ್ನು ಮಣಿಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ವಹಿವಾಟು ಸೇರಿದಂತೆ, ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಇವರು ಸುಲಿಗೆ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ನಾಲ್ಕು ವಾಹನ, ಎರಡು ಬೈಕ್, ಆರು ಮೊಬೈಲ್ ಫೋನ್ ಸೇರಿದಂತೆ ₹3,88,950 ನಗದನ್ನು ವಶಪಡಿಸಿಕೊಂಡಿದ್ದಾರೆ.
ಶಸ್ತ್ರಾಸ್ತ್ರ ವಶ
ಭದ್ರತಾ ಪಡೆಗಳು ಚುರಾಚಾಂದಪುರ ಜಿಲ್ಲೆಯಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬಂದೂಕುಗಳು, ಎಲೆಕ್ಟ್ರಾನಿಕ್ ಸ್ಫೋಟಕ ಮತ್ತು ಕಾಡತೂಸುಗಳ ಜೊತೆಗೆ 9 ಎಂಎಂ ಪಿಸ್ತೂಲ್ ಹಾಗೂ ಮೂರು ಗ್ರೆನೇಡ್ (ಕೈ ಬಾಂಬ್) ಪತ್ತೆ ಹಚ್ಚಿ ವಶಪಡಿಸಿಕೊಂಡಿವೆ.
ಬೊಂಗ್ಬಾಲ್ ಗ್ರಾಮ ಸಮೀಪದ ಲಮ್‌ಜಾಂಗ್ ಅರಣ್ಯ ವಲಯದಲ್ಲಿ ನಡೆಸಿದ ಮತ್ತೊಂದು ಶೋಧ ಕಾರ್ಯಾಚರಣೆಯಲ್ಲಿ 303 ರೈಫಲ್, ಸಿಂಗಲ್ ಬ್ಯಾರೆಲ್ ಬಂದೂಕು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.