ಕೊಚ್ಚಿ: ಪ್ರಶಸ್ತಿ ವಿಜೇತ ಮಲಯಾಳಂ ಚಲನಚಿತ್ರ ಸಂಕಲನಕಾರ ನಿಶಾದ್ ಯೂಸುಫ್ (43) ಅವರು ತಮ್ಮ ಫ್ಲಾಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬುಧವಾರ ನಸುಕಿನ 2 ಗಂಟೆ ಸುಮಾರಿಗೆ ನಿಶಾದ್ ಯೂಸುಫ್ ಶವವಾಗಿ ಪತ್ತೆಯಾಗಿದ್ದಾರೆ. ಕೊಚ್ಚಿಯ ಪನಂಬಳ್ಳಿ ನಗರದ ಫ್ಲಾಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಎಂಬುದು ಪ್ರಾಥಮಿಕ ತೀರ್ಮಾನ. ಪೋಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಉಂಡಾ, ಸೌದಿ ವೆಳ್ಳಕ್ಕ, ತಲ್ಲುಮಳ, ವುಲ್ಫ್, ಆಪರೇಷನ್ ಜಾವಾ, ಒನ್, ಚವೀರ್, ರಾಮಚಂದ್ರ ಬಾಸ್ & ಕೋ, ಉಡಲ್, ಅಲಂಗಂ, ಆಯಿರಂತ್ತೊನ್ನು ನೊಣಂಗಳ್, ಅಡಿಯೋಸ್ ಅಮಿಗೋ ಮತ್ತು ಎಕ್ಸಿಟ್ ಸೇರಿದಂತೆ ಗಮನಾರ್ಹ ಚಲನಚಿತ್ರಗಳಾದರೆ, ಬಾಜೂಕಾ ಮತ್ತು ಅಲಪ್ಪುಳ ಜಿಮ್ಖಾನಾ ಬಿಡುಗಡೆಯಾಗಲಿರುವ ಚಿತ್ರಗಳು.
ಚಿತ್ರ ತಂತ್ರಜ್ಞರ ಸಂಘವಾದ ಎಫ್.ಇ.ಎಫ್.ಸಿ. ಎ ಪ್ರತಿಕ್ರಿಯಿಸಿದ್ದು, ಬದಲಾಗುತ್ತಿರುವ ಮಲಯಾಳಂ ಚಿತ್ರರಂಗದ ಸಮಕಾಲೀನ ದೃಷ್ಟಿಕೋನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಿಶಾದ್ ಯೂಸುಫ್ ಚಲನಚಿತ್ರ ಸಂಪಾದಕರಾಗಿದ್ದರು. ನಿಶಾದ್ ಅವರ ಹಠಾತ್ ಮರಣವನ್ನು ಚಿತ್ರ ಜಗತ್ತು ಅರಗಿಸಿಕೊಳ್ಳಲು ಕಷ್ಟಸಾಧ್ಯ ಎಂದು ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.