ಕಾಸರಗೋಡು: ಬೋವಿಕ್ಕಾನ ಮುಳಿಯಾರಿನ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕದ ನಸಿರ್ಂಗ್ ಅಧಿಕಾರಿ ಹುದ್ದೆಗೆ ತಾತ್ಕಾಲಿಕ ನೇಮಕಾತಿ ನಡೆಸಲಾಗುವುದು. ಪ್ಲಸ್ ಟು, ಬಿ.ಎಸ್ಸಿ ನಸಿರ್ಂಗ್ ಯಾ ಜನರಲ್ ನಸಿರ್ಂಗ್, ಕೇರಳ ನರ್ಸಿಂಗ್ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ ಅರ್ಹತೆಯಿರುವ ಉದ್ಯೋಗಾರ್ಥಿಗಳು ಅರ್ಹತೆಯನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಅಕ್ಟೋಬರ್ 31ರಂದು ಮಧ್ಯಾಹ್ನ 12 ಗಂಟೆಯೊಳಗೆ ಛಿhಛಿmuಟiಥಿಚಿಡಿ@gmಚಿiಟ.ಛಿom ಇಮೇಲ್ ಮೂಲಕ ಅಥವಾ ಅಂಚೆ ಮೂಲಕ ಕಾರಡ್ಕ ಬ್ಲಾಕ್ ಪಂಚಾಯಿತಿ ಕುಟುಂಬ ಆರೋಗ್ಯ ಕೇಂದ್ರ ಮುಳಿಯಾರ್, ಬೋವಿಕ್ಕಾನ 671 542 ಎಂಬ ವಿಳಾಸಕ್ಕೆ ಅರ್ಜಿ ಕಳುಹಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ.