HEALTH TIPS

ಬಾಂಗ್ಲಾದೇಶದ ಕಾಳಿ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಉಡುಗೊರೆ ನೀಡಿದ್ದ ಕಿರೀಟ ಕಳವು

 ಢಾಕಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಕಾಳಿ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ್ದ ಅಮೂಲ್ಯ ಕಿರೀಟ ಕಳವಾಗಿದೆ ಎಂದು ವರದಿಯಾಗಿದೆ.

ಸತ್ಖಿರದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಾಲಯದಲ್ಲಿ ಗುರುವಾರ ತಡರಾತ್ರಿ ಕಳ್ಳತನವಾಗಿದೆ. ಅರ್ಚಕರು ದೇವಾಲಯದಿಂದ ಹೊರಟ ಬಳಿಕ ಈ ಕೃತ್ಯವೆಸಗಲಾಗಿದೆ ಎಂದು ದಿ ಡೈಲಿ ಸ್ಟಾರ್‌ ಸುದ್ದಿ ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.


ಕಿರೀಟ ಕಾಣೆಯಾಗಿರುವುದನ್ನು ದೇವಾಲಯದ ಸ್ವಚ್ಛತಾ ಸಿಬ್ಬಂದಿ ಗಮನಿಸಿದ್ದರು. ಕಳ್ಳರ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು 2021 ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರ ಸ್ಮರಣಾರ್ಥ, ದೇವಾಲಯಕ್ಕೆ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಇದು ರಾಜತಾಂತ್ರಿಕವಾಗಿ ಅಷ್ಟೇ ಅಲ್ಲದೆ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ಮಹತ್ವ ಹೊಂದಿದೆ.

ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಮೋದಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹಂಚಿಕೊಂಡಿದ್ದರು. ಕೋವಿಡ್‌- 19 ಸಾಂಕ್ರಾಮಿಕ ಬಳಿಕ ಮೋದಿ ಅವರು ಕೈಗೊಂಡ ಮೊದಲ ವಿದೇಶ ಭೇಟಿ ಅದಾಗಿತ್ತು.

ಹಿಂದೂ ಪುರಾಣಗಳ ಪ್ರಕಾರ ಭಾರತ ಹಾಗೂ ನೆರೆ ರಾಷ್ಟ್ರಗಳಲ್ಲಿರುವ 51 ಶಕ್ತಿ ಪೀಠಗಳಲ್ಲಿ ಜೆಶೋರೇಶ್ವರಿ ದೇವಾಲಯವೂ ಒಂದಾಗಿದೆ. ಇದನ್ನು ಅನಾರಿ ಎಂಬ ಬ್ರಾಹ್ಮಣ 12 ನೇ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿಸಿದ್ದರು ಎಂಬ ನಂಬಿಕೆ ಇದೆ.

13 ನೇ ಶತಮಾನದಲ್ಲಿ ಒಮ್ಮೆ ನವೀಕರಿಸಲಾಗಿದ್ದ ಈ ದೇವಸ್ಥಾನವನ್ನು, ರಾಜಾ ಪ್ರತಾಪಾದಿತ್ಯ 16 ನೇ ಶತಮಾನದಲ್ಲಿ ಪುನರ್‌ನಿರ್ಮಾಣ ಮಾಡಿದ್ದರು ಎಂದು ಹೇಳಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries