ಪೆರ್ಲ: ನಾಲಂದ ಕಾಲೇಜು ಭೂಮಿತ್ರ ಸೇನಾ ಕ್ಲಬ್ ಹಾಗೂ ನಾಲಂದ ಗ್ರಾಮ ವಿಕಾಸ ಯೋಜನೆಯ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಹಾಗೂ ಸ್ವಚ್ಛತಾ ಹೀ ಸೇವಾ ಸಪ್ತಾಹದ ಅಂಗವಾಗಿ ಕನ್ನಟಿಕಾನ ಹಾಗೂ ಪಡ್ರೆ ಅಂಗನವಾಡಿ ಪರಿಸರವನ್ನು ಶುಚಿಗೊಳಿಸಲಾಯಿತು.
ವಾರ್ಡ್ ಸದಸ್ಯ ರಾಮಚಂದ್ರ ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಅಂಗನವಾಡಿ ಶಿಕ್ಷಕಿ ಕುಸುಮ, ಕಾಲೇಜು ಕಂಪ್ಯೂಟರ್ ಶಿಕ್ಷಕಿ ಲಕ್ಷ್ಮಿತ, ಗ್ರಾಮ ವಿಕಾಸ ಯೋಜನೆ ಕಾರ್ಯದರ್ಶಿ ವೇಣುಗೋಪಾಲ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀನಿಧಿ ಕೆ., ಭೂಮಿತ್ರಸೇನಾ ಕ್ಲಬ್ ಸಂಯೋಜಕ ಮನೋಜ್ ಕುಮಾರ್ ಪಿ., ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ ಅಶಾಲತ ಅಂಗನವಾಡಿ ಮಕ್ಕಳ ಪೋಷಕರು ಸಹಕರಿಸಿದರು.