ಕೊಟ್ಟಾಯಂ: ‘ಹರಿಶ್ರೀ’ ಬಿಟ್ಟು ವಿದ್ಯಾರಂಭ ನಡೆಸಿದ ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಮೇಲೆ ಟ್ರೋಲ್‍ಗಳ ಸುರಿಮಳೆ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿದೆ.
ಅಧಿಕೃತ ನಿವಾಸದಲ್ಲಿ ತನ್ನ ತಂದೆ-ತಾಯಿಯೊಂದಿಗೆ ಮೊದಲಕ್ಷರ ಬರೆಯಲು ಬಂದಿದ್ದ ಮಗು ಹರಿಶ್ರೀ ಎಂದು ಬರೆಯದೆ ಇಂಗ್ಲಿಷ್ ಅಕ್ಷರ ಹಾಗೂ ಮಲಯಾಳಂ ಅಕ್ಷರಗಳನ್ನು ಬರೆದು ನಂತರ ಕಾಗದದ ಮೇಲೆ ‘ತಂದೆ, ತಾಯಿ, ಒಳ್ಳೆಯತನ’ ಎಂಬ ಪದಗಳನ್ನು ಬರೆಸಲಾಗಿತ್ತು.
ಜಾತ್ಯತೀತತೆ ತೋರಿಸಲು ಹರಿಶ್ರೀ ಬರೆದಿಲ್ಲ ಎಂದು ಸಚಿವರು ಬಳಿಕ ವ್ಯಾಖ್ಯಾನ ನೀಡಿರುವರು. ಅಕ್ಷರಾಭ್ಯಾಸಕ್ಕೆ ಬಂದಿದ್ದ ಮಗು ಸಿಪಿಎಂ ಕೊಲ್ಲಂ ಜಿಲ್ಲಾ ಕಾರ್ಯದರ್ಶಿಯವರ ಸಂಬಂಧಿ.
ಆದರೆ ಹರಿಶ್ರೀ ಬರೆಯುತ್ತಿಲ್ಲ ಎಂದಾದರೆ ವಿದ್ಯಾಭ್ಯಾಸ ಆರಂಭಿಸಲು ವಿಜಯದಶಮಿ ದಿನವನ್ನೇಕೆ ಆಯ್ಕೆ ಮಾಡಿಕೊಂಡರು ಎಂದು ಸಾಮಾಜಿಕ ಜಾಲತಾಣಗಳು ಪ್ರಶ್ನಿಸಿವೆ. ವಿಜಯದಶಮಿಯು ಹಿಂದೂ ಸಂಪ್ರದಾಯದ ಪ್ರಕಾರ ಶಿಕ್ಷಣವನ್ನು ಪ್ರಾರಂಭಿಸುತ್ತದೆ. ಶಿಕ್ಷಣ ಆರಂಭದ ದಿನವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಜಾತ್ಯಾತೀತತೆ ತೋರದ ಶಿಕ್ಷಣ ಸಚಿವರು ಹಾಗೂ ಅವರ ಕುಟುಂಬದವರು ಹರಿಶ್ರೀಗೆ ಮಾತ್ರ ವಿರುದ್ಧವಾಗಿರುವುದಕ್ಕೆ ತರ್ಕವೇನು? ಜಾತ್ಯತೀತರಾಗಬೇಕಾದರೆ ಶಾಲೆ ಪ್ರಾರಂಭದ ದಿನವೇ ಶಿಕ್ಷಣದ ಆರಂಭವನ್ನು ಗುರುತಿಸುವುದು ಉತ್ತಮವಲ್ಲವೇ ಎಂದು ಹಲವರು ಕೇಳಿದ್ದಾರೆ.
ಸಚಿವರಿಗೆ ಹರಿಶ್ರೀ ಬಾರದ ಕಾರಣ ಬೇರೆ ಪದ ಬರಡೆಸಿದ್ದಾರೆ ಎಂದು ಕೆಲವರು ಲೇವಡಿ ಮಾಡಿದ್ದಾರೆ. . ಜಾತ್ಯತೀತ ಸಚಿವರ ಹೆಸರನ್ನು ಕುಟ್ಟಿ ಎಂದು ಮಾತ್ರ ಬಳಸಬೇಕು ಮತ್ತು ಹಿಂದೂ ಹೆಸರು ಶಿವನ್ ಅನ್ನು ಕೈಬಿಡಬೇಕು ಎಂದು ಜಾಲತಾಣದಲ್ಲಿ ಹಲವರು ಒತ್ತಾಯಿಸಿದವರೂ ಇದ್ದಾರೆ.