ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶಾರದಾ ಪೂಜೆ ಜರಗಿತು. ವಿದ್ಯಾದಶಮಿಯ ಪರ್ವದಿನದಂದು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಪುಸ್ತಕ ಪೂಜೆ ನಡೆಸಿ ಪುಸ್ತಕಗಳನ್ನು ವಿತರಿಸಿದರು. ಶ್ರೀ ಮಠದ ವೇದವಿದ್ಯಾರ್ಥಿಗಳು, ಭಕ್ತರು, ಶಿಷ್ಯಂದಿರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.