ಬದಿಯಡ್ಕ: ಇತ್ತೀಚೆಗೆ ನೀರ್ಚಾಲು ಶಾಲೆಯಲ್ಲಿ ನಡೆದ ಉಪಜಿಲ್ಲಾ ಕ್ರೀಡೋತ್ಸವದಲ್ಲಿ 80ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದವು. ಇದರಲ್ಲಿ ಸಮಗ್ರ (ಓವರ್ ಆಲ್)ಪ್ರಶಸ್ತಿಯನ್ನು ಅಗಲ್ಪಾಡಿ ಎಸ್. ಎ.ಪಿ.ಎಚ್.ಎಸ್ ಎಸ್.ಶಾಲೆ ತನ್ನದಾಗಿಸಿಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ದ್ವಿತಿ ರೈ ಪ್ರಶಸ್ತಿಯನ್ನು ತನ್ನ ದಾಗಿಸಿಕ್ಕೊಂಡಿರುತ್ತಾಳೆ. 40ಕ್ಕೂ ಅಧಿಕ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.