ನವದೆಹಲಿ: ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಸುಮಾರು ₹1,78,173 ಕೋಟಿಯನ್ನು ಗುರುವಾರ ಬಿಡುಗಡೆಮಾಡಿದೆ.
ಇದರಲ್ಲಿ ರಾಜ್ಯಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6,498 ಕೋಟಿ ಬಿಡುಗಡೆಯಾಗಿದೆ.
ಆಯಾ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಹಣದಲ್ಲಿ ಬಾಕಿ ಇರುವ ನಿಯಮಿತ ಕಂತಿನ ಜೊತೆಗೆ ಒಂದು ಮುಂಗಡ ಕಂತು ಸೇರಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ ₹31,962 ಕೋಟಿ, ರಾಜಸ್ಥಾನಕ್ಕೆ ₹10,737 ಕೋಟಿ, ಮಧ್ಯಪ್ರದೇಶಕ್ಕೆ ₹13,987 ಕೋಟಿ, ಅಸ್ಸಾಂಗೆ ₹5,573 ಕೋಟಿ, ಛತೀಸ್‌ಗಢಕ್ಕೆ ₹6,070, ಗುಜರಾತ್‌ಗೆ ₹6,117 ಕೋಟಿ, ಒಡಿಶಾಗೆ ₹8,068 ಕೋಟಿ ನೀಡಲಾಗಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಾದ ಬಿಹಾರಕ್ಕೆ ₹17,921 ಕೋಟಿ, ಮಹಾರಾಷ್ಟ್ರಕ್ಕೆ ₹11,255 ಕೋಟಿ, ಆಂಧ್ರಪ್ರದೇಶಕ್ಕೆ ₹7,211 ಕೋಟಿ ನೀಡಲಾಗಿದೆ.
ಟಿಎಂಸಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳಕ್ಕೆ ₹13,404 ಕೋಟಿ, ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡಿಗೆ ₹7,268 ಕೋಟಿ, ಎಡರಂಗ ಅಧಿಕಾರದಲ್ಲಿರುವ ಕೇರಳಕ್ಕೆ ₹3,430 ಕೋಟಿ ನೀಡಲಾಗಿದೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಾದ ಕರ್ನಾಟಕಕ್ಕೆ ₹6,498 ಕೋಟಿ, ತೆಲಂಗಾಣಕ್ಕೆ ₹3,745 ಕೋಟಿ, ಹಿಮಾಚಲಪ್ರದೇಶಕ್ಕೆ ₹1,479 ಕೋಟಿ ಬಿಡುಗಡೆ ಮಾಡಲಾಗಿದೆ.