ಪತ್ತನಂತಿಟ್ಟ: ಮೃತ ಎಡಿಎಂ ನವೀನ್ ಬಾಬು ಅವರ ಕುಟುಂಬ ಸದಸ್ಯರನ್ನು ನೌಕರರು ಮತ್ತು ಶಿಕ್ಷಕರ ಸಂಘಟನೆಗಳ ಒಕ್ಕೂಟ (ಎಫ್‍ಇಟಿಒ-ಫೆಟ್ಟೋ) ಮುಖಂಡರು ಭೇಟಿ ಮಾಡಿದರು.
ಬಿಎಂಎಸ್ ರಾಜ್ಯಾಧ್ಯಕ್ಷ ಬಿ. ಶಿವಾಜಿ ಸುದರ್ಶನನ್, ಫೆಟ್ಟೋ ರಾಜ್ಯಾಧ್ಯಕ್ಷ ಎಸ್.ಕೆ. ಜಯಕುಮಾರ್, ಉಪಾಧ್ಯಕ್ಷೆ ಅನಿತಾ ರವೀಂದ್ರನ್, ಎನ್.ಜಿ.ಓ. ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ರಾಜೇಶ್, ಎನ್ ಟಿಯು ಅಧ್ಯಕ್ಷ ಪಿ.ಎಸ್. ಗೋಪಕುಮಾರ್, ಕೆಜಿಒ ಸಂಘದ ರಾಜ್ಯಾಧ್ಯಕ್ಷ ಬಿ. ಮನು, ಉಪಾಧ್ಯಕ್ಷ ಡಾ. ಎ.ಬಿ. ರಮಾದೇವಿ, ಸೆಕ್ರೆಟರಿಯೇಟ್ ಎಂಪ್ಲಾಯಿಸ್ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ ಕೆ. ನಾಯರ್, ಕೇರಳ ಪಿಎಸ್‍ಸಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಹರಿಕೃಷ್ಣನ್, ಪತ್ರಿಕಾ ಕಾರ್ಯಕರ್ತರ ಸಂಘದ ಕಾರ್ಯದರ್ಶಿ ಸಿ.ಕೆ. ಜಯಪ್ರಸಾದ್ ಮೊದಲಾದವರು ಮಲೆಯಾಳಪುಳದ ಮನೆಗೆ ತೆರಳಿ ಸಾಂತ್ವನ ಹೇಳಿದರು. ಎಲ್ಲವನ್ನು ನೋಡಿಕೊಳ್ಳಲಾಗುವುದು ಮತ್ತು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಪ್ರಯತ್ನಗಳು ನಿರಂತರವಾಗಿ ನಡೆಯಲಿವೆ ಎಂದು ಭರವಸೆ ನೀಡಿದರು.