ಬದಿಯಡ್ಕ: ಬದಿಯಡ್ಕ ಶಬರಿಗಿರಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅಯ್ಯಪ್ಪ ಮಂದಿರದ ನಿರ್ಮಾಣ ಕೆಲಸ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಾತೃಸಮಿತಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ನಿರ್ಮಾಣ ಸಮಿತಿಯ ಅಧ್ಯಕ್ಷ ದೇವದಾಸ್ ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ನರೇಂದ್ರ ಬಿ ಯನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಮಂದಿರ ನಿರ್ಮಾಣದ ಕಾರ್ಯ ತ್ವರಿತಗತಿಯಲ್ಲಿ ಸಾಗಬೇಕಿದೆ. ಇದಕ್ಕಾಗಿ ಕಾರ್ಯಕರ್ತರು ಸಂಘಟಿತರಾಗಲು ಕರೆನೀಡಿದರು.
ಅಯ್ಯಪ್ಪ ಮಂದಿರ ನಿರ್ಮಾಣ ಮಾತೃಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರತಿಭಾ ಬಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಜಗದಂಬ ಯಂ. ಹಾಗೂ ಲೀಲಾವತಿ ಕೆ. ಯಂ., ಪ್ರಧಾನ ಕಾರ್ಯದರ್ಶಿಯಾಗಿ ಕವಿತಾಗಿರೀಶ್ ರೈ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ರಾಜೇಶ್ವರಿ ರೈ, ಸುನಿತಾ ಕಾಡಮನೆ, ಶ್ವೇತಾ ಸಂತೋಷ್ ರೈ ಮತ್ತು ಜಯಲಕ್ಷ್ಮಿ ಕೆ ಇವರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ರೇಷ್ಮಾ ಎ. ಯಸ್. ಅವರನ್ನು ಆರಿಸಲಾಯಿತು. ಟ್ರಸ್ಟಿಗಳಾದ ಜಯಂತಿ ಚೆಟ್ಟಿಯಾರ್, ರಮೇಶ್ ಆಳ್ವ ಹಾಗೂ ಕೃಷ್ಣ ಚುಳ್ಳಿಕಾನ ಉಪಸ್ಥಿತರಿದ್ಧರು. ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟಿನ ಕೋಶಾಧಿಕಾರಿ ಗುರುಪ್ರಸಾದ್ ರೈ ಕೆ ವಂದಿಸಿದರು.