HEALTH TIPS

ಯು.ಡಿ.ಎಫ್. ನಾಯಕರ ಚಿನ್ನದ ಕಳ್ಳಸಾಗಣೆ ಮತ್ತು ಹವಾಲಾ ನಂಟು ಇಂದು ಬಯಲಾಗುತ್ತಿತ್ತು; ಪ್ರತಿಪಕ್ಷಗಳು ವಿಧಾನಸಭೆಯಿಂದ ಓಡಿ ಹೋಗಿವೆ: ಕೆ.ಟಿ.ಜಲೀಲ್

ತಿರುವನಂತಪುರ: ವಿಧಾನಸಭೆ ಅಧಿವೇಶನದಲ್ಲಿ ಗದ್ದಲ ಉಂಟಾಗಲು ಕಾರಣ ಅದರ ಬಂಡವಾಳ ಹೊರಬರುವ ಭೀತಿಯಿಂದ. ಇದನ್ನು ಗಮನಿಸಿಯೇ ಪ್ರತಿಪಕ್ಷಗಳು ಓಡಿ ಹೋದವು ಎಂದು ಶಾಸಕ ಕೆ.ಟಿ.ಜಲೀಲ್ ಹೇಳಿದ್ದಾರೆ. ಫೇಸ್ ಬುಕ್ ಮೂಲಕ ಜಲೀಲ್ ಟೀಕೆ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಮಲಪ್ಪುರಂ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂದು ಸೋಮವಾರ ಸದನದಲ್ಲಿ ಪ್ರತಿಪಕ್ಷಗಳು ಮಂಡಿಸಿದ ತುರ್ತು ನಿರ್ಣಯದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಒಪ್ಪಿದಾಗ ಯುಡಿಎಫ್ ಟೀಕೆ ಮುಮದುವರಿಸಿತು ಎಂದು ಜಲೀಲ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ, ಇದು ಚರ್ಚೆಯನ್ನು ತಪ್ಪಿಸಲು ಗಂಟಲು ಕಟ್ಟುವ ವಿರೋಧದಿಂದ ಮಾಡಿದ ಚಕಮಕಿಯಾಗಿದೆ ಎಂದಿರುವರು.

ಕಳೆದ ಹತ್ತು ವರ್ಷಗಳಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ವಶಪಡಿಸಿಕೊಂಡಿರುವ ಚಿನ್ನಾಭರಣ, ಹವಾಲಾ ಹಣ, ಆರೋಪಿಗಳ ರಾಜಕೀಯ ಸಂಬಂಧಗಳನ್ನು ಲೆಕ್ಕ ಹಾಕಿ ಪ್ರತಿಪಕ್ಷಗಳನ್ನು ಕೆಣಕುವ ಅವಕಾಶವನ್ನು ಪ್ರತಿಪಕ್ಷಗಳು ಸದಸನ ಬಹಿಷ್ಕರಿಸಿ ತಪ್ಪಿಸಿಕೊಂಡವು. ನಾಳೆ ಅದೇ ನಿರ್ಣಯವನ್ನು ತುರ್ತು ನಿರ್ಣಯವಾಗಿ ತಂದು ಚರ್ಚಿಸುವ ಧೈರ್ಯ ವಿಪಕ್ಷಗಳಿಗೆ ಇದೆಯೇ ಎಂದು ಜಲೀಲ್ ಪ್ರಶ್ನಿಸಿದರು.

ಯುಡಿಎಫ್ ನಾಯಕರ ಚಿನ್ನದ ಕಳ್ಳಸಾಗಣೆ ಮತ್ತು ಹವಾಲಾ ನಂಟು ಇಂದು ಬಯಲಾಗುತ್ತಿತ್ತು. ಸದನ ಕಲಾಪಕ್ಕೆ ಅಡ್ಡಿಪಡಿಸುವುದರಿಂದ ತಪ್ಪಿಸಿಕೊಂಡರು ಎಂದು ಯಾರೂ ಭಾವಿಸಬಾರದೆಂದು ಜಲೀಲ್ ಬರೆದಿರುವರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries