ಕಾಸರಗೋಡು: ಪೋಲೀಸರು ದರೋಡೆಕೋರರಂತೆ ವರ್ತಿಸುತ್ತಿದ್ದಾರೆ ಎಂದು ಶಾಸಕ ಪಿ.ವಿ.ಅನ್ವರ್ ಹೇಳಿದ್ದಾರೆ. ವಂಚನೆ ತಂಡದ ಸ್ವರೂಪವನ್ನು ಪೋಲೀಸರು ತೋರಿಸುತ್ತಿದ್ದಾರೆ ಎಂದವರು ತಿಳಿಸಿರುವರು.
ಕೆಟ್ಟ ಪೋಲೀಸ್ ಅಧಿಕಾರಿಗಳನ್ನು ಕಾಸರಗೋಡು ಮತ್ತು ಮಲಪ್ಪುರಂಗೆ ನೇಮಕ ಮಾಡಲಾಗುತ್ತಿದೆ. ಪೋಲೀಸರು ವಶಪಡಿಸಿಕೊಂಡ ಆಟೋ ರಿಕ್ಷಾವನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಕಾಸgಗೋಡು ಆಟೋ ಚಾಲಕ ಅಬ್ದುಲ್ ಸತ್ತಾರ್ ಅವರ ಸಂಬಂಧಿಕರನ್ನು ಭೇಟಿ ಮಾಡಿದ ನಂತರ ಪಿವಿ ಅನ್ವರ್ ಈ ಪ್ರತಿಕ್ರಿಯೆ ನೀಡಿದರು.
ಅಬ್ದುಲ್ ಸತ್ತಾರ್ ಅವರನ್ನು ಪೋಲೀಸರು ಗೂಂಡಾಗಿರಿ ಮಾಡಿದ್ದಾರೆ. ಇದು ಪ್ರತ್ಯೇಕ ಘಟನೆಯಲ್ಲ. ಕೇರಳದಾದ್ಯಂತ ಇದೇ ಪರಿಸ್ಥಿತಿ ಇದೆ ಎಂದು ಪಿ.ವಿ.ಅನ್ವರ್ ಟೀಕಿಸಿದರು.
ಪೋಲೀಸರಿಗೆ ಅತೀ ಹೆಚ್ಚು ಬಲಿಯಾಗುತ್ತಿರುವವರು ಆಟೋ ಕಾರ್ಮಿಕರು ಮತ್ತು ದ್ವಿಚಕ್ರ ವಾಹನ ಚಾಲಕರು ಕೇರಳದಲ್ಲಿ ಪೋಲೀಸರನ್ನು ಕಂಡರೆ ಭಯಪಡುತ್ತಾರೆ. ಸಾರ್ವಜನಿಕ ಸೇವಕರು ಪೋಲೀಸ್ ಠಾಣೆ ಪ್ರವೇಶಿಸುವಂತಿಲ್ಲ. ಅಬ್ದುಲ್ ಸತ್ತಾರ್ ಅವರ ಆಟೋರಿಕ್ಷಾ ವಶಪಡಿಸಿಕೊಂಡಿರುವ ಎಸ್ ಐ ಅನೂಪ್ ಅವರನ್ನು ವಜಾಗೊಳಿಸಬೇಕು ಎಂದು ಪಿ.ವಿ.ಅನ್ವರ್ ಆಗ್ರಹಿಸಿದರು. ಅಬ್ದುಲ್ ಸತ್ತಾರ್ ಕುಟುಂಬಕ್ಕೆ ಸರ್ಕಾರ ಮನೆ ನೀಡಬೇಕು ಎಂದೂ ತಿಳಿಸಿದರು.
ಏತನ್ಮಧ್ಯೆ, ಎಸ್‍ಐ ಅನೂಪ್ ಅವರು ಈ ಹಿಂದೆ ಸಮಸ್ಯೆ ಉಂಟು ಮಾಡಿರುವುದು ಸಾಬೀತಾದ ದೃಶ್ಯಾವಳಿಗಳು ಹೊರಬಂದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ.