ಜೈಪುರ:ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು ತನ್ನಿಂದ ತಾನಾಗೇ ಚಲಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಬೆಂಕಿಯೊಂದಿಗೆ ಕಾರು ಚಲಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.
ಜೈಪುರದ ಅಜ್ಮೀರ್ ರಸ್ತೆಯ ಸುದರ್ಶನಪುರದ ಬಳಿ ಭಾನುವಾರ ಈ ಘಟನೆ ನಡೆದಿದೆ.
ನೋಡು ನೋಡುತ್ತಿದ್ದಂತೆ ಬೆಂಗಿ ಧಗಧಗಿಸಿದೆ. ಆಗ ಕಾರಿನ ಸುತ್ತ ಜಮಾಯಿಸಿದ ಜನ ಅದನ್ನು ನೋಡಿಕೊಂಡು ಅಲ್ಲಿಯೇ ನಿಂತಿದ್ದರು. ಆಗ ಇದ್ದಕ್ಕಿದ್ದಂತೆ ಕಾರು ಮುಂದೆ ಚಲಿಸಿದೆ. ಇದರಿಂದ ಜನ ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ.
ಕಾರು ಸ್ವಲ್ಪ ದೂರ ಹೋಗಿ ಡಿವೈಡರ್‌ಗೆ ಡಿಕ್ಕಿಯಾಗಿ ನಿಂತಿದೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ಸ್ಥಳೀಯ ಪೊಲೀಸ್ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು ವಾಹನ ತಯಾರಿಕಾ ಕಂಪನಿಗೆ ನೋಟಿಸ್ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.