ಪತ್ತನಂತಿಟ್ಟ: ಎಡಿಎಂ ನವೀನ್ ಬಾಬು ಸಾವಿನಲ್ಲಿ ಸಂಚು ಇರುವ ಬಗ್ಗೆ ಸಂಶಯವಿದೆ. ಸಿಪಿಎಂ ಪತ್ತನಂತಿಟ್ಟ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಉದಯಭಾನು ಈ ಬಗ್ಗೆ ಮಾತನಾಡಿ, ಕಣ್ಣೂರು ಕಲೆಕ್ಟರ್ ವಿರುದ್ಧ ಮಾತ್ರವಲ್ಲದೆ ಎಲ್ಲರ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವರು.
ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ.ದಿವ್ಯಾ ಅವರ ರಾಜೀನಾಮೆಯಿಂದ ಪತ್ತನಂತಿಟ್ಟ ಜಿಲ್ಲಾ ಸಮಿತಿಯ ಬೇಡಿಕೆಯನ್ನು ಅಂಗೀಕರಿಸಲಾಗಿದೆ ಎಂದು ಕೆ.ಪಿ. ಉದಯಭಾನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಡಿಎಂ ಅವರ ಬೀಳ್ಕೊಡುಗೆ ಸಮಾರಂಭದ ಹಿಂದೆ ಷಡ್ಯಂತ್ರವಿದೆ ಎಂದು ಶಂಕಿಸಲಾಗಿದೆ. ಅದರಲ್ಲಿ ಜಿಲ್ಲಾಧಿಕಾರಿಯ ಪಾತ್ರವೂ ಮಹತ್ತರ ಎನ್ನಲಾಗುತ್ತಿದೆ. ನವೀನ್ ಬಾಬು ಕುಟುಂಬದವರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ನೀಡಿದ ಬೀಳ್ಕೊಡುಗೆ ಸಮಾರಂಭಕ್ಕೆ ಪಿ.ಪಿ.ದಿವ್ಯಾ ಹೋಗಿದ್ದು ಯಾಕೆ? ತನಿಖೆಯಲ್ಲಿ ಯಾವುದೇ ಹೊರಗಿನ ಹಸ್ತಕ್ಷೇಪ ಇರುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ನವೀನ್ ಬಾಬು ಕುಟುಂಬದ ಹಿತ ಕಾಪಾಡಲಾಗುವುದು. ರಾಜ್ಯ ಸಮಿತಿಯು ಸಂಘಟನಾ ಪ್ರಕ್ರಿಯೆಯನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಪಿಪಿ ದಿವ್ಯಾ ಆಹ್ವಾನಿಸದ ಕಾರ್ಯಕ್ರಮಕ್ಕೆ ಹೋಗಿದ್ದು ಯಾಕೆ? ಎಲ್ಲಾದರೂ ಹೋಗುವ ಪರಿಪಾಠ ಅವರಿಗಿದೆಯೇ ಎಂದೂ ಕೇಳಿದರು. ನವೀನ್ ಬಾಬು ಕುಟುಂಬಸ್ಥರ ಜತೆ ಇದ್ದು ಚರ್ಚಿಸುತ್ತೇನೆ ಎಂದವರು ತಿಳಿಸಿರುವರು.