HEALTH TIPS

ಮಣಿಪುರ: ಗ್ರಾಮ ಪಂಚಾಯತ್ ಮುಖ್ಯಸ್ಥನಿಗೆ ಸೇರಿದ ಫಾರ್ಮ್‌ ಹೌಸ್‌ಗಳಿಗೆ ಬೆಂಕಿ

       ಇಂಫಾಲ್‌: ಮಣಿಪುರದ ಜಿರಿಬಾಮ್ ಜಿಲ್ಲೆಯ ನುಂಗ್ಖಾಲ್‌ನಲ್ಲಿ, ಹಿಲ್‌ಘಾಟ್‌ ಗ್ರಾಮ ಪಂಚಾಯಿತಿಯ ಪ್ರಧಾನರಾದ ಎಲ್‌. ಸೊಮೊರೆಂಡ್ರೊ ಅವರಿಗೆ ಸೇರಿದ ಎರಡು ಫಾರ್ಮ್‌ ಹೌಸ್‌ಗಳಿಗೆ ದುಷ್ಕರ್ಮಿಗಳು ಶನಿವಾರ ತಡರಾತ್ರಿ ಬೆಂಕಿ ಹಚ್ಚಿದ್ದಾರೆ.

         ಭದ್ರತಾ ಪಡೆಗಳು ಸ್ಥಳಕ್ಕೆ ಬಂದಿದ್ದು, ತನಿಖೆ ನಡೆಸಿವೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

          ಬೊರೊಬೆಕ್ರಾ ಪೊಲೀಸ್ ಠಾಣೆ ಸಮೀಪದ ಗ್ರಾಮವೊಂದರ ಮೇಲೆ ಉಗ್ರರು ಶನಿವಾರ ಬೆಳಿಗ್ಗೆ ಬಾಂಬ್‌ ದಾಳಿ ನಡೆಸಿದ್ದು, ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆದಿದೆ.

ಮೈತೇಯಿ-ಕುಕಿ ಸಮುದಾಯದ ನಡುವಿನ ಸಂಘರ್ಷವನ್ನು ಕೊನೆಗಾಣಿಸಲು ಈ ಎರಡೂ ಪಂಗಡಗಳನ್ನು ಪ್ರತಿನಿಧಿಸುವ ಶಾಸಕರ ಸಭೆಯು ನವದೆಹಲಿಯಲ್ಲಿ ಈಚೆಗಷ್ಟೇ ನಡೆದಿತ್ತು.

ಥೌಬಲ್‌ನಲ್ಲಿ ಶಸ್ತ್ರಾಸ್ತ್ರ ವಶ

            ಥೌಬಲ್‌ ಜಿಲ್ಲೆಯಲ್ಲಿ ಕೈಗೊಂಡ ಶೋಧ ಕಾರ್ಯಾಚರಣೆ ಸಮಯದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

            ಭದ್ರತಾ ಪಡೆಗಳು ಶನಿವಾರ ಎಸ್‌ಟಿಬಿಎನ್‌ಎ ಗೇಟ್‌ ಬಳಿಯ ಐರನ್‌ ಹಿಲ್‌ನಲ್ಲಿ ಶೋಧ ನಡೆಸಿದಾಗ 9 ಎಂಎಂ ಪಿಸ್ತೂಲ್, ನಾಲ್ಕು ಗ್ರೆನೇಡ್‌ (ಕೈ ಬಾಂಬು), ಸ್ಮೋಕ್‌ ಗ್ರೆನೇಡ್‌ ಇತ್ಯಾದಿಗಳು ಸಿಕ್ಕಿವೆ ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries