HEALTH TIPS

ಪೂರ್ವ ಅಭ್ಯಾಸ ಮರೆಯದ ರಾಜ್ಯ: ಕೇಂದ್ರ ಸೂಚಿಸಿದ ಹೊಸ ಕೃಷಿ ಸಹಕಾರಿ ಸಂಘ ರಚನೆಗೆ ಎಳ್ಳು ನೀರುಬಿಟ್ಟ ಕೇರಳ: ಹಣಕಾಸಿನ ನೆರವು ಮತ್ತು ವಿಶೇಷ ನಿಧಿಗಳಿಂದ ಕೇರಳ ದೂರ

ತಿರುವನಂತಪುರ: ಪಂಚಾಯತ್ ಮಟ್ಟದಲ್ಲಿ ಕೇಂದ್ರೀಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಹಕಾರ ಸಂಘಗಳನ್ನು ರಚಿಸಲು ಕೇಂದ್ರವು ಸಲಹೆ ನೀಡಿದೆ.

ಕೃಷಿ, ಮೀನುಗಾರಿಕೆ ಮತ್ತು ಹೈನುಗಾರಿಕೆ ವಲಯದಲ್ಲಿ ಗುಂಪುಗಳನ್ನು ಆರಂಭಿಸಬೇಕು. ಕೇಂದ್ರವು ಸಿದ್ಧಪಡಿಸಿದ ಮಾದರಿ ಬೈ-ಲಾ ಪ್ರಕಾರ, ಈ ಗುಂಪುಗಳು ಕೇಂದ್ರ ಸಚಿವಾಲಯಗಳಿಂದ ಹಣಕಾಸಿನ ನೆರವು ಮತ್ತು ಹಣವನ್ನು ಪಡೆಯಲಿದೆ.  ಆದರೆ ಕೇರಳ ಈ ಹಿಂದಿನ ಕ್ರಮದಂತೆ ಇದನ್ನು ವಿರೋಧಿಸಿದೆ.

ನಬಾರ್ಡ್ ಮುಖ್ಯ ಜವಾಬ್ದಾರಿಯನ್ನು ಹೊಂದಿದೆ. ಐದು ವರ್ಷಗಳಲ್ಲಿ 1,572 ಸಹಕಾರ ಸಂಘಗಳನ್ನು ರಚಿಸಬೇಕು. ಕೃಷಿ ಸಾಲ ಒಕ್ಕೂಟಗಳು ಕೇರಳದ ಪ್ರಾಥಮಿಕ ಸಹಕಾರಿ ಬ್ಯಾಂಕ್‍ಗಳಾಗಿವೆ. ಕೃಷಿ, ಹೈನುಗಾರಿಕೆ, ಮೀನುಗಾರಿಕಾ ಸಂಘಗಳ ಮೂಲಕ ಕೋಟಿಗಟ್ಟಲೆ ಆರ್ಥಿಕ ನೆರವು ನೀಡುವುದಾಗಿ ಕೇಂದ್ರ ಭರವಸೆ ನೀಡಿದೆ. ಆದರೆ, ಇವುಗಳನ್ನು ಕೈಗೆತ್ತಿಕೊಳ್ಳಲು ಕೇರಳ ಇನ್ನೂ ಇಚ್ಛೆ ವ್ಯಕ್ತಪಡಿಸಿಲ್ಲ.

ಕೇಂದ್ರದ ಪ್ರಕಾರ, ರಾಜ್ಯದಲ್ಲಿ 1,680 ಕೃಷಿ ಸಾಲ ಸಂಘಗಳು ಅಥವಾ ಪ್ರಾಥಮಿಕ ಸಹಕಾರಿ ಬ್ಯಾಂಕ್‍ಗಳಿವೆ. ಆದರೆ 48 ಪಂಚಾಯಿತಿಗಳಲ್ಲಿ ಗ್ರೂಪ್‍ಗಳ ಮೂಲಕ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. 58 ಪಂಚಾಯಿತಿಗಳಲ್ಲಿ ಮುಚ್ಚುವ ಹಂತದಲ್ಲಿವೆ. ಈ ಸ್ಥಳಗಳಲ್ಲಿ ವಿವಿಧ ಉದ್ದೇಶಗಳಿಗಾಗಿ 106 ಕೃಷಿ ಸಾಲ ಸಂಘಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಕೇರಳದ 1,666 ಹಳ್ಳಿಗಳಲ್ಲಿ 3,098 ಡೈರಿ ಸೊಸೈಟಿಗಳಿವೆ. ಆದರೆ ರೈತರಿಗೆ ನೇರ ಲಾಭ ಪಡೆಯಲು ಇನ್ನೂ 1,003 ಡೈರಿ ಸೊಸೈಟಿಗಳನ್ನು ಆರಂಭಿಸಲು ಕೇಂದ್ರ ಮುಂದಾಗಿದೆ.

ರೈತರಿಗೆ ತುಂಬಾ ಅನುಕೂಲವಾಗುವ ಯೋಜನೆಯೊಂದನ್ನು ಕೇಂದ್ರ ಘೋಷಿಸಿದೆ. ಆದರೆ ಸರ್ಕಾರದ ಹಠಮಾರಿತನದಿಂದ ಇವೆಲ್ಲವೂ ರಾಜ್ಯದ ರೈತರಿಗೆ ನಷ್ಟವಾಗುತ್ತಿದೆ. ಹೊಸ ಯೋಜನೆಯು ರೈತರ ಜೀವನ ಮತ್ತು ಕೃಷಿ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಲಿವೆ.  ಈ ಮೂಲಕ ಕೇಂದ್ರದ ಯೋಜನೆಗಳಿಂದ ರೈತರಿಗೆ ಬ್ಯಾಂಕಿಂಗ್ ಸೇವೆ ಮತ್ತು ಸಹಾಯ ಸಿಗಲಿದೆ. ತರಬೇತಿ, ವ್ಯಾಪಾರವನ್ನು ಸುಧಾರಿಸಲು ಆರ್ಥಿಕ ನೆರವು ಮತ್ತು ಕೇಂದ್ರ ಯೋಜನೆಗಳೊಂದಿಗೆ ಸಂಪರ್ಕ ಲಭ್ಯವಿರುತ್ತದೆ. ಆದರೆ ರಾಜ್ಯ ಸರ್ಕಾರ ಇವೆಲ್ಲವನ್ನೂ ರೈತರಿಗೆ ನಿರಾಕರಿಸುತ್ತಿದೆ ಎಂಬುದು ಈಗೀಗ ಸಾಬೀತುಗೊಳ್ಳುತ್ತಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries