ಬದಿಯಡ್ಕ : ತುಳು ಲಿಪಿ ಸಂಶೋಧಕ, ಕೇರಳ ತುಳು ಅಕಾಡೆಮಿ ಸ್ಥಾಪಕ ಅಧ್ಯಕ್ಷ ದಿ.ವೆಂಕಟರಾಜ ಪುಣಿಂಚಿತ್ತಾಯರ ಜನ್ಮದಿನಾಚರಣೆಯನ್ನು ತುಳು ಲಿಪಿ ದಿನಾಚರಣೆಯನ್ನಾಗಿ ಬದಿಯಡ್ಕದ ಶ್ರೀನಿಧಿ ಕ್ಲಿನಿಕ್ ನಲ್ಲಿ ನಡೆಸಲಾಯಿತು.
ತುಳುವೆರೆ ಆಯನೋ ಕೂಟದ ಅಧ್ಯಕ್ಷ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅಧ್ಯಕ್ಷತೆ ವಹಿಸಿದ್ದರು. ಆಶಾಕಿರಣ ಶುಭ ಹಾರೈಸಿದರು.
ಗಾಯಕ ರತ್ನಾಕರ ಓಡಂಗಲ್ಲು ತುಳು ಹಾಡು ಹಾಡಿದರು. ಡಾ.ಶ್ರೀನಿಧಿ ಸರಳಾಯರು ತುಳು ಲಿಪಿ ಸಂಶೋಧಕ ವಿದ್ವಾಂಸ ದಿ.ವೆಂಕಟ್ರಾಜ ಪುಣಿಂಚಿತ್ತಾಯರ ಸಾಹಿತ್ಯ ಹಾಗೂ ಬದುಕಿನ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ದೀಕ್ಷಿತ್, ಕೃಷ್ಣ ಡಿ.ಬೆಳಿಂಜ, ಹರೀಶ್,ಸುಶ್ಮಿ, ಜಗದೀಶ್ ಮೊದಲಾದವರು ಭಾಗವಹಿಸಿದ್ದರು. ಸುಂದರ ಬಾರಡ್ಕ ವಂದಿಸಿದರು.