ಪುಣೆ: ಹೆಲಿಕಾಪ್ಟರ್ ಪತನವಾಗಿ ಇಬ್ಬರು ಪೈಲಟ್ ಹಾಗೂ ಒಬ್ಬರು ಎಂಜಿನಿಯರ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಪುಣೆ: ಹೆಲಿಕಾಪ್ಟರ್ ಪತನವಾಗಿ ಇಬ್ಬರು ಪೈಲಟ್ ಹಾಗೂ ಒಬ್ಬರು ಎಂಜಿನಿಯರ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ಪೈಲಟ್‌ಗಳಾದ ಪರಂಜೀತ್ ಸಿಂಗ್, ಜಿ.ಕೆ. ಪಿಳ್ಳೈ ಹಾಗೂ ಎಂಜಿನಿಯರ್ ಪ್ರೀತಂ ಭಾರದ್ವಾಜ್ ಎಂದು ಗುರುತಿಸಲಾಗಿದೆ.
ಅಪಘಾತಕ್ಕೆ ಒಳಗಾದ ಈ ಹೆಲಿಕಾಪ್ಟರ್ ಹೆರಿಟೇಜ್ ಏವಿಯೇಷನ್ ಕಂಪನಿಗೆ ಸೇರಿದ್ದು ಎನ್ನಲಾಗಿದೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.