ಕೊಚ್ಚಿ: ನವ ಕೇರಳ ಸಮಾವೇಶದಲ್ಲಿನ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಎರ್ನಾಕುಳಂ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನಿಖೆಗೆ ಆದೇಶಿಸಿದ್ದು, ಕಪ್ಪು ಬಾವುಟ ತೋರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಡಿವೈಎಫ್‍ಐ ಕಾರ್ಯಕರ್ತರು ಹಲ್ಲೆ ನಡೆಸಿರುವುದನ್ನು ಉಲ್ಲೇಖಿಸಿ ತನಿಖೆಗೆ ಆದೇಶ ನೀಡಲಾಗಿದೆ. ನವ ಕೇರಳ ಯಾತ್ರೆ ವೇಳೆ ಮುಖ್ಯಮಂತ್ರಿಗಳ ವಾಹನಕ್ಕೆ ಎದುರಾಗಿ ಬಾವುಟ ಪ್ರದರ್ಶಿಸಲಾಗಿತ್ತು.
ಎರ್ನಾಕುಳಂ ಡಿಸಿಸಿ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಅವರ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕ್ರಮ ಅಪರಾಧಕ್ಕೆ ಪ್ರಚೋದನೆಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು
ನವಕೇರಳ ಬಸ್ಸಿಗೆ ಕಪ್ಪು ಬಾವುಟ ತೋರಿಸಿದ ಯೂತ್ ಕಾಂಗ್ರಸ್ಸ್ ಜಿಲ್ಲಾ ಉಪಾಧ್ಯಕ್ಷರಿಗೆ ಥಳಿಸಲಾಗಿತ್ತು. ಗುಂಪು ಗುಂಪಾಗಿ ಮಹಿಳಾ ಮುಖಂಡರಿಗೆ ಥಳಿಸಿದ್ದಾರೆ ಎಂಬ ದೂರು ಕೂಡ ಇದೆ. ಜಿಲ್ಲಾ ಉಪಾಧ್ಯಕ್ಷ ಸುಧೀಶ್ ಅವರನ್ನು ಸಿಪಿಎಂ ಕಾರ್ಯಕರ್ತರು ಮತ್ತು ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಸುತ್ತುವರಿದು ಹೆಲ್ಮೆಟ್ ಮತ್ತು ಗಿಡದ ಕುಂಡಗಳಿಂದ ಥಳಿಸಿದ್ದಾರೆ ಎಂದು ದೂರಲಾಗಿದೆ.