ನವದೆಹಲಿ: ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿಯಿಂದ ಷಿಕಾಗೊ ಹೊರಟಿದ್ದ ಏರ್ ಇಂಡಿಯಾ ವಿಮಾನ, ಕೆನಡಾದ ಇಕ್ವಾಲೆಟ್ (Iqaluit) ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸಿದೆ ಎಂದು ಏರ್‌ಲೈನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ: ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿಯಿಂದ ಷಿಕಾಗೊ ಹೊರಟಿದ್ದ ಏರ್ ಇಂಡಿಯಾ ವಿಮಾನ, ಕೆನಡಾದ ಇಕ್ವಾಲೆಟ್ (Iqaluit) ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸಿದೆ ಎಂದು ಏರ್‌ಲೈನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು (ಅ.15) ದೆಹಲಿಯಿಂದ ಷಿಕಾಗೊಗೆ ಹೊರಟಿದ್ದ AI127 ವಿಮಾನಕ್ಕೆ ಆನ್‌ಲೈನ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.
ಭದ್ರತಾ ನಿಯಮದ ಪ್ರಕಾರ ವಿಮಾನ ಹಾಗೂ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ವಿಮಾನ ನಿಲ್ದಾಣಗಳಲ್ಲಿ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.
ಇಂದು ಮುಂಬೈಯಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಮಗದೊಂದು ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇದೆ ಎಂದು ಬಂದ ಹುಸಿ ಬೆದರಿಕೆ ಕರೆಯಿಂದಾಗಿ ದೆಹಲಿಯಲ್ಲಿ ಲ್ಯಾಂಡ್ ಮಾಡಿತ್ತು. ಬಳಿಕ ನಡೆದ ಪರಿಶೀಲನೆಯಲ್ಲಿ ಅನುಮಾನಾಸ್ಪದವಾಗಿ ಯಾವುದೇ ವಸ್ತು ಪತ್ತೆಯಾಗಿರಲಿಲ್ಲ.