ನವದೆಹಲಿ: ನೇಪಾಳದ ಭೀಕರ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯು ಸಾರ್ವಜನಿಕರ ಸಹಾಯಕ್ಕಾಗಿ ಸಹಾಯವಾಣಿ ಆರಂಭಿಸಿದೆ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ರಾಯಭಾರ ಕಚೇರಿಯು ಪ್ರವಾಹದಲ್ಲಿ ಸಿಲುಕಿರುವ ಯಾವುದೇ ಭಾರತೀಯರಿಗೆ ಸಹಾಯ ಮಾಡಲು ನೇಪಾಳದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಭಾರತೀಯರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಭಾರತೀಯರನ್ನು ಸ್ಥಳಾಂತರಿಸಲು ನಾವು ನೇಪಾಳದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯ ನಾಗರಿಕರು ಯಾವುದೇ ಸಹಾಯಕ್ಕಾಗಿ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ನೇಪಾಳದಿಂದ ಬರುವ ವರದಿಗಳ ಪ್ರಕಾರ ಸುಮಾರು 200 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 30 ಮಂದಿ ಕಾಣೆಯಾಗಿದ್ದಾರೆ. ಮಳೆಯಿಂದಾಗಿ ಕಠ್ಮಂಡುವಿನ ನೆರೆಹೊರೆಗಳು ಜಲಾವೃತವಾಗಿವೆ. ಭೂಕುಸಿತದಿಂದಾಗಿ ಹಲವು ಭಾಗಗಳು ಸಂಪರ್ಕ ಕಡಿತಗೊಂಡಿವೆ.
"ಹೆದ್ದಾರಿಗಳಲ್ಲಿ ಸಿಲುಕಿರುವವರನ್ನು ಒಳಗೊಂಡಂತೆ ಹುಡುಕಾಟ ಮತ್ತು ರಕ್ಷಣೆಯ ಮೇಲೆ ನಮ್ಮ ಗಮನವಿದೆ" ಎಂದು ನೇಪಾಳದ ಗೃಹ ವ್ಯವಹಾರಗಳ ಸಚಿವಾಲಯದ ವಕ್ತಾರ ರಿಷಿ ರಾಮ್ ತಿವಾರಿ ಹೇಳಿದ್ದಾರೆ.
ಕೆಲವು ವರದಿಗಳ ಪ್ರಕಾರ ಸುಮಾರು 4000 ಜನರನ್ನು ತೆಪ್ಪಗಳು, ಹೆಲಿಕಾಪ್ಟರ್‌ಗಳ ಮೂಲಕ ರಕ್ಷಿಸಲಾಗಿದೆ.
ಲಲಿತ್‌ಪುರದಲ್ಲಿ, ನೇಪಾಳದ ಸಶಸ್ತ್ರ ಪೊಲೀಸ್ ಪಡೆ ಜನರನ್ನು ರಕ್ಷಿಸಲು, ನದಿಯನ್ನು ದಾಟಲು ಜಿಪ್ ಲೈನ್‌ಗಳನ್ನು ಬಳಸಿದೆ ಎಂದು ಅವರು ತಿಳಿಸಿದ್ದಾರೆ.
ಸಹಾಯದ ಅಗತ್ಯವಿರುವ ನೇಪಾಳದಲ್ಲಿರುವ ಭಾರತೀಯ ಪ್ರಜೆಗಳು ಈ ಕೆಳಗಿನ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಇದು WhatsApp ಮೂಲಕ ಲಭ್ಯವಿದೆ
+977-9851316807 (ತುರ್ತು ಸಹಾಯವಾಣಿ)
+977-9851107021 (ಕಾನ್ಸುಲರ್)
+977-9749833292 (ASO, ಕಾನ್ಸುಲರ್)
ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಮತ್ತು ಅಗತ್ಯವಿರುವ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.