HEALTH TIPS

ಏತಡ್ಕ :ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕದ ದ್ವಿತೀಯ ಆವೃತ್ತಿಯ ಬಿಡುಗಡೆ

ಬದಿಯಡ್ಕ: ನಾಡು ಒಂದಾಗುವ ಅದ್ಭುತ ಕ್ಷಣವೆಂದರೆ ಆ ಊರಿನ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವಗಳು. ತನು-ಮನ-ಧನದ ಬಂಧದ ಮೂಲಕ ಭಗವದ್ಭಕ್ತರು ಸೇವಾ ಕೈಂಕರ್ಯ ತೊಡಬೇಕು. ಊರಿನ ಶ್ರೇಯಸ್ಸು ಅಭಿವೃದ್ಧಿ ನೆಲೆಗೊಳ್ಳುತ್ತದೆ ಎಂದು ಉದ್ಯಮಿ ಎಸ್.ಎನ್.ಮಯ್ಯ ತಿಳಿಸಿದರು.

ಏತಡ್ಕ ಶ್ರೀಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ-25 ಅಂಗವಾಗಿ ಹಮ್ಮಿಕೊಂಡ ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕದ ದ್ವಿತೀಯ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸ್ವಾಗತ ಸಮಿತಿ ಸದಸ್ಯೆ ಗೀತಾ ಎಂ ಭಟ್ ಬದಿಯಡ್ಕ ಮೊದಲ ಪ್ರತಿಯನ್ನು ಸ್ವೀಕರಿಸಿದರು.


ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ವೈ.ಸುಬ್ರಾಯ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಸಹ ಗೌರವಾಧ್ಯಕ್ಷ ವೈ.ಶಂಕರ ಭಟ್ , ಉಪಾಧ್ಯಕ್ಷ ಪತ್ತಡ್ಕ ಗಣಪತಿ ಭಟ್, ಉಷಾ ಶಾಮ ಭಟ್ಟರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ಖ್ಯಾತ ವೈದ್ಯ ಡಾ .ಮೋಹನಕುಮಾರ ವೈ.ಯಸ್ ಮಾತನಾಡಿ, ಈ ಬ್ರಹ್ಮ ಕಲಶೋತ್ಸವದ ಕಾರ್ಯಚಟುವಟಿಕೆಗಳು ಸಮರ್ಪಕವಾಗಿ ಮೂಡಿಬರುತ್ತಿದೆ. ಭಗವದ್ಭಕತ್ತರ ಸಹಕಾರ ಇನ್ನಷ್ಟು ಜೊತೆಸೇರಲಿ ಎಂದು ಹಾರೈಸಿದರು.

ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದ ನಂತರ  ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ದೇವರುಗಳನ್ನು ಬಾಲಾಲಯದಲ್ಲಿ ಸ್ಥಾಪಿಸಲಾಯಿತು." ನಮ್ಮ ದೇವರು , ನಮ್ಮ ದೇವರೆನ್ನುವ ತುಡಿತ ಮತ್ತು ಶಕ್ತಿ, ಚೈತನ್ಯ, ಸ್ಫೂರ್ತಿ ಎನ್ನುವ ದುಡಿತದಿಂದ ನವೀಕರಣ, ಅಷ್ಟಬಂಧ ಬ್ರಹ್ಮಕಲಶೋತ್ಸವವು ಸಾಂಗವಾಗಿ ನೆರವೇರಲಿದೆ ಎಂದು ಸಂಕಲ್ಪ ನುಡಿಯಲ್ಲಿ ಅನುಗ್ರಹ ಮಾತುಗಳನ್ನಾಡಿದರು

ಗೀತಾ ಎಂ ಭಟ್ ಬದಿಯಡ್ಕ ಪ್ರಾರ್ಥನೆಗೈದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶ್ಯಾಮ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮಿತಿಯ ಸಂಯೋಜಕ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.ಇನ್ನೋರ್ವ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries