ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನಕ್ಕೆ ದುಬೈಯಲ್ಲಿ ಉದ್ಯೋಗಿಯಾಗಿರುವ ಸತೀಶ್ ಮಯ್ಯ ಹಾಗೂ ಗೋಪಿಕಾ ಸತೀಶ ಮಯ್ಯ ಅವರು ನಿನ್ನೆ ಭೇಟಿ ನೀಡಿದರು.
ಪಣಂಬೂರು ದಿ.ವೆಂಕಟ್ರಾಯ ಐತಾಳರ ಹಿರಿಯ ಪುತ್ರಿ ಗೋಪಿಕಾ ಮಯ್ಯ ಹಾಗು ಸತೀಶ್ ಮಯ್ಯ ಅವರನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಮಹಾಪೆÇೀಷಕರಾಗಿ ಗೌರವಿಸಲಾಯಿತು. ಪಣಂಬೂರು ವೆಂಕಟರಾಯ ಐತಾಳರ ಹೆಸರಿನ ಮ್ಯೂಸಿಯಂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಹಾಗೂ ಟ್ರಸ್ಟಿಯಾದ ಸುಮಿತ್ರಾ ಮಯ್ಯ, ಶ್ರೀಮುಖ ಮಯ್ಯ. ಶ್ರೀರಾಜ ಮಯ್ಯ ಅತಿಥಿಗಳನ್ನು ಗೌರವಿಸಿದರು. ಗೋಪಿಕಾ ಮಯ್ಯ ಅವರು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಮೂಲಕ ಉಡುಪಿಯಲ್ಲಿ ತೆಂಕುತಿಟ್ಟು ಯಕ್ಷಗಾನದ ಅಭ್ಯಾಸ ಕೇಂದ್ರವನ್ನು ಶ್ರೀ ಸೋದೆ ಮಠದ ಆಶ್ರಯದಲ್ಲಿ ನಡೆಸುತ್ತಿದ್ದಾರೆ. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯಬ್ಯಾಸ ಮಾಡಿರುತ್ತಾರೆ.