ಜೈಪುರ: ಜಾತಿ ಆಧಾರಿತ ತಾರತಮ್ಯವನ್ನು ಕೊನೆಗೊಳಿಸುವಂತೆ ಆರ್‌ಎಸ್‌ಎಸ್(RSS) ಮುಖಂಡ ಸುರೇಶ್ ಭಯ್ಯಾಜಿ ಜನರಿಗೆ ಮನವಿ ಮಾಡಿದರು.
ನಮ್ಮ 12 ಜ್ಯೋತಿರ್ಲಿಂಗಗಳು ಯಾವುದಾದರೂ ಜಾತಿಗೆ ಸೇರಿವೆಯೇ?
ಜಾತಿ ತಾರತಮ್ಯ ತೊಲಗಿ ಸಮಾಜವಾಗಿ ಎಲ್ಲರೂ ಒಂದಾಗಬೇಕು. ಹುಟ್ಟಿನಿಂದಲೇ ಜಾತಿ ನಿರ್ಧಾರವಾಗುತ್ತದೆ. ಇದೊಂದು ಸಾಮಾಜಿಕ ಪಿಡುಗು. ಇದು ಕೊನೆಗೊಳ್ಳಬೇಕಾಗಿದೆ. ಎಲ್ಲಿ ತಾರತಮ್ಯವಿರುವುದಿಲ್ಲವೋ ಆ ಸಮಾಜವು ಉತ್ತಮ ಸಮಾಜವಾಗಿ ನಿಲ್ಲುತ್ತದೆ. ಸಮಾಜದ ಎಲ್ಲಾ ಭಾಗಗಳು ಮುಖ್ಯ. ಯಾರೂ ಕೀಳಲ್ಲ ಎಂದು ಭಯ್ಯಾಜಿ ಹೇಳಿದರು.
ರಾಜ್ಯದ ಗಡಿಗಳು ಹೇಗೆ ನಮ್ಮೊಳಗೆ ತಾರತಮ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲವೋ ಹಾಗೆಯೇ ಜನ್ಮದ ಆಧಾರದ ಮೇಲೆ ಪಡೆದ ಸ್ಥಾನಮಾನವು ನಮ್ಮೊಳಗೆ ತಾರತಮ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ತಪ್ಪು ಕಲ್ಪನೆ ಕೊನೆಗಾಣಬೇಕು. ಯಾವುದೇ ಗೊಂದಲವಿದ್ದರೆ ಅದನ್ನು ತೆಗೆದುಹಾಕಬೇಕು. ಅನಾವಶ್ಯಕ ಅಹಂಕಾರ ವಿಜೃಂಭಿಸಿದಾಗ ಅದನ್ನು ನಿಗ್ರಹಿಸಬೇಕಾಗುತ್ತದೆ ಎಂದರು.