ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಇದರ ಅಂಗ ಸಂಸ್ಥೆ ನಾರಿ ಚಿನ್ನಾರಿ ವತಿಯಿಂದ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ದಸರಾ ನಾಡಹಬ್ಬದ ಅಂಗವಾಗಿ 'ನವ ವನಿತಾ'ಕಾರ್ಯಕ್ರಮ ಅ. 12 ರಂದು ಮಧ್ಯಾಹ್ನ 3ರಿಂದ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ಚಲನಚಿತ್ರ-ರಂಗ ನಟಿ ರೂಪಶ್ರೀ ವರ್ಕಾಡಿ ಸಮಾರಂಭ ಉದ್ಘಾಟಿಸುವರು. ನಾರಿ ಚಿನ್ನಾರಿ ಅಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸುವರು. ಡಾ. ರೇಖಾ ಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಕಲಾವಿದೆ ಸುಶೀಲಾ ಮಾಧವ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ, ಸಮೂಹ ನೃತ್ಯ, ಭಕ್ತಿ ಭಾವಗೀತೆ, ಭಾವ ನೃತ್ಯ, ಮಲಯಾಳ ಹಾಡು, ಆಶುಭಾಷಣ, ನಾರಿ ಚಿನ್ನಾರಿ ಸದಸ್ಯರಿಂದ ಹುಲಿ ಕುಣಿತ ನಡೆಯುವುದು.