ಬದಿಯಡ್ಕ: ಎಡನೀರು ಮಠದಲ್ಲಿ ನವರಾತ್ರಿ ಪ್ರಯುಕ್ತ ಗುರುವಾರ ಸಂಜೆ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ವಾಹನಪೂಜೆಯನ್ನು ನೆರವೇರಿಸಿ ಭಗವದ್ಭಕ್ತರನ್ನು ಆಶೀರ್ವದಿಸಿದರು. ಶ್ರೀಮಠದ, ಶಾಲೆಯ ವಾಹನಗಳು, ಭಗವದ್ಭಕ್ತರು ವಾಹನಪೂಜೆಯಲ್ಲಿ ಪಾಲ್ಗೊಂಡಿದ್ದರು. ನಂತರ ಶ್ರೀಗಳು ಶ್ರೀಮಠದಲ್ಲಿ ಶಾರದಾಪೂಜೆ ನೆರವೇರಿಸಿದರು.