ಕಾಸರಗೋಡು: ಕೇರಳ ಜಲ ಪ್ರಾಧಿಕಾರ, ಕಾಸರಗೋಡು ವಿಭಾಗದ ಅಧೀನದಲ್ಲಿರುವ ನೀರಿನ ತೆರಿಗೆ ಬಿಲ್‍ಗಳನ್ನು ಪಾವತಿಸದ ಗ್ರಾಹಕರು, ಹಾಳಾದ ಮೀಟರ್ ಬದಲಾಯಿಸದ ಗ್ರಾಹಕರು ಮತ್ತು ಮೀಟರ್ ಬದಲಾಯಿಸದ ಗ್ರಾಹಕರ ನೀರಿನ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇರಳ ಜಲ ಪ್ರಾಧಿಕಾರ, ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
ಗ್ರಾಹಕರು ಕಾಸರಗೋಡು ವಿಭಾಗದ ವ್ಯಾಪ್ತಿಯ ಚೆರುವತ್ತೂರು, ಕಾಞಂಗಾಡು, ಕಾಸರಗೋಡು, ಕುಂಬಳೆ ಮತ್ತು ಬೋವಿಕ್ಕಾನ ವಿಭಾಗ ಕಚೇರಿಗಳಲ್ಲಿ ಅಥವಾ ಆನ್‍ಲೈನ್‍ನಲ್ಲಿ ಆದಷ್ಟು ಬೇಗ ಬಾಕಿಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕೇರಳ ಜಲ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.