HEALTH TIPS

ಭಾರತೀಯ ಔದ್ಯಮಿಕ ಕ್ಷೇತ್ರದ ಶಕೆಯೊಂದು ಅಂತ್ಯ: ರತನ್‌ಗೆ ಭಾವಪೂರ್ಣ ವಿದಾಯ

 ಮುಂಬೈ: ಉದ್ಯಮಿ ಹಾಗೂ ಮಹಾದಾನಿ ರತನ್‌ ಟಾಟಾ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಇಲ್ಲಿನ ವರ್ಲಿಯಲ್ಲಿರುವ ಚಿತಾಗಾರದಲ್ಲಿ ಗುರುವಾರ ನೆರವೇರಿಸಲಾಯಿತು. ಇದರೊಂದಿಗೆ ಭಾರತದ ಉದ್ಯಮ ಕ್ಷೇತ್ರದ ಶಕೆಯೊಂದು ಕೊನೆಗೊಂಡಂತಾಯಿತು.

ಪಾರ್ಸಿ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಪಾರ್ಥಿವ ಶರೀರವನ್ನು 'ಟವರ್‌ ಆಫ್‌ ಸೈಲೆನ್ಸ್‌'ನಲ್ಲಿ ಇರಿಸಲಾಗುತ್ತದೆ.

ರತನ್‌ ಟಾಟಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಮಾತ್ರ ವಿದ್ಯುತ್‌ ಚಿತಾಗಾರದಲ್ಲಿ ನೆರವೇರಿಸಲಾಯಿತು.

ಗುರುವಾರ ಸಂಜೆ ರತನ್‌ ಟಾಟಾ ಅವರ ಪಾರ್ಥಿವ ಶರೀರವನ್ನು ಚಿತಾಗಾರಕ್ಕೆ ತಂದ ನಂತರ, ಮುಂಬೈ ಪೊಲೀಸರು ಕುಶಾಲ ತೋಪು ಹಾರಿಸಿ, ಗೌರವ ವಂದನೆ ಸಲ್ಲಿಸಿದಾಗ, ಇಡೀ ಚಿತಾಗಾರದಲ್ಲಿ ಗಾಢಮೌನ ಮನೆ ಮಾಡಿತ್ತು. ಸಾಮಾನ್ಯ ಜನರಲ್ಲದೇ, ಉದ್ಯಮ, ರಾಜಕೀಯ, ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮಹಾನ್‌ ಚೇತನಕ್ಕೆ ಭಾವಪೂರ್ಣ ವಿದಾಯ ಹೇಳಿದರು.

ರತನ್‌ ಅವರ ಸಹೋದರ ಜಿಮ್ಮಿ ಟಾಟಾ, ಮಲತಾಯಿ ಸಿಮೋನ್ ಟಾಟಾ, ಮಲಸಹೋದರ ನೋಯಲ್‌ ಟಾಟಾ, ಟಾಟಾ ಗ್ರೂಪ್‌ ಅಧ್ಯಕ್ಷ ಎನ್‌.ಚಂದ್ರಶೇಖರನ್ ಅವರಲ್ಲದೆ ಉದ್ಯಮ ಸಮೂಹದ ಪ್ರಮುಖ ನೇತಾರರು ಅಂತಿಮ ನಮನ ಸಲ್ಲಿಸಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್, ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ ಆಠವಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಗುಜರಾತ್‌ ಸಿ.ಎಂ ಭೂಪೇಂದ್ರ ಪಟೇಲ್‌, ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್‌ ಶಿಂದೆ ಉಪಸ್ಥಿತರಿದ್ದರು.

ನಮನ: 'ರತನ್‌ ಟಾಟಾ ಅವರ ನಿಧನಕ್ಕೆ ಕೋಟ್ಯಂತರ ಭಾರತೀಯರು ದುಃಖಿತರಾಗಿದ್ದು, ಅವರ ದುಃಖದಲ್ಲಿ ನಾನೂ ಭಾಗಿಯಾಗಿರುವೆ. ಪ್ರಧಾನಿ ನರೇಂದ್ರ ಮೋದಿ ಪರವಾಗಿ ಪುಷ್ಪಗುಚ್ಛವಿರಿಸಿ, ಅಂತಿಮ ನಮನ ಸಲ್ಲಿಸಿರುವೆ' ಎಂದು ಅಮಿತ್ ಶಾ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೂರು ದಿನ ಧಾರ್ಮಿಕ ವಿಧಿಗಳು: ಅಂತ್ಯಕ್ರಿಯೆ ನಂತರ ಮೂರು ದಿನಗಳ ಕಾಲ ಇತರ ವಿಧಿಗಳನ್ನು ನೆರವೇರಿಸಲಾಗುವುದು. ಇವುಗಳನ್ನು ದಕ್ಷಿಣ ಮುಂಬೈನ ಕೊಲಾಬಾದಲ್ಲಿರುವ ಟಾಟಾ ಅವರ ಬಂಗಲೆಯಲ್ಲಿ ನೆರವೇರಿಸಲಾಗುವುದು ಎಂದು ಚಿತಾಗಾರದಲ್ಲಿ ಉಪಸ್ಥಿತರಿದ್ದ ಧರ್ಮಗುರುವೊಬ್ಬರು ಹೇಳಿದರು.

ಅಂತಿಮ ದರ್ಶನ ವ್ಯವಸ್ಥೆ: ರತನ್‌ ಟಾಟಾ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಿಂದ ಕೊಲಾಬಾದಲ್ಲಿನ ಅವರ ಬಂಗಲೆಗೆ ಕರೆತರಲಾಯಿತು. ನಂತರ, ಟಾಟಾ ಟ್ರಸ್ಟ್‌ನ ಜನರಲ್‌ ಮ್ಯಾನೇಜರ್ ಶಂತನು ನಾಯ್ಡು ಅವರು ಯೆಜ್ಡಿ ಬೈಕ್‌ ನಡೆಸುತ್ತಾ, ರತನ್‌ ಟಾಟಾ ಪಾರ್ಥಿವ ಶವವಿದ್ದ ಅಲಂಕೃತ ವಾಹನದ ಮೆರವಣಿಗೆ ಮುನ್ನಡೆಸಿದರು.

ವಾಹನ, ನರಿಮನ್‌ ಪಾಯಿಂಟ್‌ನಲ್ಲಿರುವ ರಾಷ್ಟ್ರೀಯ ಪ್ರದರ್ಶಕ ಕಲೆಗಳ ಕೇಂದ್ರ(ಎನ್‌ಸಿಪಿಎ) ತಲುಪಿದ ನಂತರ, ಅಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಭಾರಿ ಸಂಖ್ಯೆಯಲ್ಲಿ ಬಂದಿದ್ದ ಜನರು, ಅಂತಿಮ ನಮನ ಸಲ್ಲಿಸಿದರು.

ಬದುಕಿನುದ್ದಕ್ಕೂ ಟಾಟಾ ಅವರ ಒಡನಾಡಿಯಾಗಿದ್ದ, ಅವರ ಪ್ರೀತಿಯ ಸಾಕುನಾಯಿ 'ಗೋವಾ' ಶವಪೆಟ್ಟಿಗೆ ಬಳಿಯೇ ಇದ್ದು ಒಡೆಯನಿಗೆ ವಿದಾಯ ಹೇಳಿತು.

ಅಂತಿಮ ದರ್ಶನ ವ್ಯವಸ್ಥೆ

ರತನ್‌ ಟಾಟಾ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಿಂದ ಕೊಲಾಬಾದಲ್ಲಿನ ಅವರ ಬಂಗಲೆಗೆ ಕರೆತರಲಾಯಿತು. ನಂತರ, ಟಾಟಾ ಟ್ರಸ್ಟ್‌ನ ಜನರಲ್‌ ಮ್ಯಾನೇಜರ್ ಶಂತನು ನಾಯ್ಡು ಅವರು ಯೆಜ್ಡಿ ಬೈಕ್‌ ನಡೆಸುತ್ತಾ, ರತನ್‌ ಟಾಟಾ ಪಾರ್ಥಿವ ಶವವಿದ್ದ ಅಲಂಕೃತ ವಾಹನದ ಮೆರವಣಿಗೆ ಮುನ್ನಡೆಸಿದರು.

ವಾಹನ, ನರಿಮನ್‌ ಪಾಯಿಂಟ್‌ನಲ್ಲಿರುವ ರಾಷ್ಟ್ರೀಯ ಪ್ರದರ್ಶಕ ಕಲೆಗಳ ಕೇಂದ್ರ (ಎನ್‌ಸಿಪಿಎ) ತಲುಪಿದ ನಂತರ, ಅಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಬಂದಿದ್ದ ಜನರು, ಅಂತಿಮ ನಮನ ಸಲ್ಲಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries