ಪೆರ್ಲ: ಯುವ ಛಾಯಾಚಿತ್ರಗಾರ ಮೂಲತಃ ಕಾಟುಕುಕ್ಕೆ ನಿವಾಸಿ ಪ್ರಸ್ತುತ ಪುತ್ತೂರು ಸಮೀಪ ನಿಂತಿಕಲ್ಲಿನ ಮವರ್ಂಜದ ಪ್ರಭಾಕರ ರೈ (47) ಹೃದಯಾಘಾತದಿಂದ ಸೋಮವಾರ ಸಂಜೆ ನಿಧನರಾದರು.
ಪೆರ್ಲದ ಅನುಪಮ ಸ್ಟುಡಿಯೋದಲ್ಲಿ ಛಾಯಾಗ್ರಹಣ ವೃತ್ತಿಗೆ ತೊಡಗಿಕೊಂಡ ಇವರು ಬಳಿಕ ಬದಿಯಡ್ಕದಲ್ಲಿ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅಡೂರಿನ ದೇವಸ್ಥಾನದ ಬಳಿ ತನ್ನದೇ ಸ್ವಂತ ಪ್ರಭಾ ಸ್ಟುಡಿಯೋ ಸ್ಥಾಪಿಸಿ ಜನಾನುರಾಗಿಯಾಗಿದ್ದರು. ಉತ್ತಮ ರಂಗ ಕಲಾವಿದರಾಗಿದ್ದ ಇವರು ಹಲವಾರು ತುಳು ನಾಟಕಗಳಲ್ಲಿ ಹಾಸ್ಯ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. ಬಳಿಕ ತಮ್ಮ ಸ್ವಂತ ಸ್ಟುಡಿಯೋ ಹಾಗೂ ಅಡೂರಿನಲ್ಲಿರುವ ಜಾಗ ಮಾರಿ ಮಡದಿಯ ಊರಾದ ಬೆಳ್ಳಾರೆಯಲ್ಲಿ ಮವಾರ್ಂಜೆಯಲ್ಲಿ ಮನೆ ಮಾಡಿ ಕೃಷಿಕರಾಗಿ ತೊಡಗಿಸಿಕೊಂಡಿದ್ದರು.ಸೋಮವಾರ ತೋಟದ ಕೆಲಸದ ನಡುವೆ ಇವರಿಗೆ ಹೃದಯಬೇನೆ ಕಾಣಿಸಿಕೊಂಡಿತ್ತು. ಮೃತರು ಪತ್ನಿ ವೀಣಾ ಪಿ.ರೈ, ಮಗಳು ಚಿನ್ಮಯಿ ಮೂಡಬಿದ್ರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ.