HEALTH TIPS

ಮೆಡಿಕಲ್ ವಿದ್ಯಾರ್ಥಿನಿಗೆ ರೈಲಲ್ಲಿ ಲೈಂಗಿಕ ದೌರ್ಜನ್ಯ-ಆರೋಪಿ ಬಂಧನ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿಯನ್ನು ಬಿಗಿದಪ್ಪಿ ಲೈಂಗಿಕ ದೌರ್ಜನ್ಯ ನಡೆಸಿದ ಕಾಸರಗೋಡು ನಾಟೆಕಲ್ಲು ಬಿಸ್ಮಿಲ್ಲಾ ಹೌಸ್ ನಿವಾಸಿ ಇಬ್ರಾಹಿಂ ಬಾದುಷಾ(28)ಎಂಬಾತನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿಗೆ ತೆರಳುತ್ತಿದ್ದ ವೆಸ್ಟ್‍ಕೋಸ್ಟ್ ಎಕ್ಸ್‍ಪ್ರೆಸ್ ರೈಲಲ್ಲಿ ಮಂಗಳವಾರ ಘಟನೆ ನಡೆದಿದೆ. 

ರೈಲು ನೀಲೇಶ್ವರ ತಲುಪುತ್ತಿದ್ದಂತೆ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯನ್ನು ಆರೋಪಿ ಏಕಾಏಕಿ ಬಿಗಿದಪ್ಪಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಈತನ ಮುಷ್ಟಿಯಿಂದ ಬಿಡಿಸಿಕೊಂಡ ವಿದ್ಯಾರ್ಥಿನಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ಸಂದರ್ಭ ರೈಲು ಕಾಞಂಗಾಡಿಗೆ ತಲುಪಿದ್ದು, ಅಲ್ಲಿ ಆರೋಪಿ ಇನ್ನೊಂದು ಬೋಗಿಯನ್ನೇರಿದ್ದನು. ಕಾರ್ಯಪ್ರವೃತ್ತರಾದ ಪೊಲೀಸರು ರೈಲು ಕಾಸರಗೋಡು ನಿಲ್ದಾಣಕ್ಕೆ ತಲುಪಿದಾಗ ಆರೋಪಿಯನ್ನು ಸೆರೆಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ಯುವ ಮಧ್ಯೆ, ಪೊಲೀಸರನ್ನು ದೂಡಿಹಾಕಿ ತನ್ನ ಅಂಗಿಬಿಚ್ಚಿ ಪರಾರಿಯಾಗಲು ಯತ್ನಿಸುತ್ತಿದ್ದಂತೆ, ಪೊಲೀಸರು  ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಹಿಂಬಾಲಿಸಿ ಮತ್ತೆ ಸೆರೆಹಿಡಿದಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries