ಕಾಸರಗೋಡು: ಮಹಾತ್ಮಾ ಗಾಂಧಿಯವರ 155 ನೇ ಜನ್ಮದಿನಚರಣೆ ಅಂಗವಾಗಿ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ರಾಷ್ಟ್ರಪಿತನ ಸಂಸ್ಮರಣೆ ಮತ್ತು ಸ್ವಚ್ಛತಾಕಾರ್ಯಕ್ರಮ ಆಯೋಜಿಸಲಾಯಿತು. ದಕ್ಷಿಣ ರೈಲ್ವೆಯ ವಿವಿಧ ನಿಲ್ದಾಣಗಳಲ್ಲಿ ಸ್ವಚ್ಛತೆ ಮತ್ತು ಸಮುದಾಯದ ಒಳಗೊಳ್ಳುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಚ್ಛತೆ ಬಗ್ಗೆ ಪ್ರತಿಜ್ಞೆ, ಸಾಂಸ್ಕøತಿಕ ಪ್ರದರ್ಶನ, ಶ್ರಮದಾನದ ಮೂಲಕ ಶುಚೀಕರಣಕ್ಕೆ ಚಾಲನೆಗಳು ಮತ್ತು ಪರಿಸರ ವಿಚಾರ ಸಂಕಿರಣಗಳು ಸೇರಿದಂತೆ ವಿವಿಧ ಚಟುವಟಿಕೆ ನಡೆಸಲಾಯಿತು. ರೈಲ್ವೆ ಸಿಬ್ಬಂದಿ, ವಿದ್ಯಾರ್ಥಿಗಳು, ಎನ್‍ಜಿಒಗಳು ಮತ್ತು ಸಾರ್ವಜನಿಕರಿಂದ ಉತ್ಸಾಹದಿಂದ ಭಾಗವಹಿಸುವ ಮೂಲಕ ಗಾಂಧೀಜಯಂತಿಯನ್ನು ವಿಶಿಷ್ಟವಾಗಿ ದಿನವನ್ನು ಆಚರಿಸಲಾಯಿತು. ಪಾಲಕ್ಕಾಡಿನಿಂದ ಮಂಗಳೂರು ವರೆಗಿನ ವಿವಿಧ ನಿಲ್ದಾಣಗಳಲ್ಲಿ ಶುಚೀಕರಣದೊಂದಿಗೆ ವಿವಿಧ ಕಾರ್ಯಕ್ರಮ ಹಮಿಕೊಳ್ಳಲಾಯಿತು.
ಕಾಞಂಗಾಡ್‍ನಲ್ಲಿ ನಡೆದ ಸಮಾರಂಬದಲ್ಲಿ ಎನ್ನೆಸ್ಸೆಸ್ ಘಟಕದ ಮಾರ್ಗದರ್ಶನದಲ್ಲಿ ಕುಣಿಯ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಉಪಕ್ರಮ ಸರಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮಾನವ ಸರಪಳಿ, ಶ್ರಮದಾನ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ರೈಲ್ವೆ ಪ್ರಯಾಣಿಕರ ಸಂಘದ ಅಧ್ಯಕ್ಷ ಅಸ್ಕಾಂ ಭಾಗವಹಿಸಿದ್ದರು. ಒಟ್ಟು 75ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕರಿಸಿದರು.