ಕಾಸರಗೋಡು: ಉಪಜಿಲ್ಲಾ 37ನೇ ವರ್ಷದ ಶಾಲಾ ವಿಜ್ಞಾನ ಮೇಳ ತಳಂಗರೆ ಮುಸ್ಲಿಂ ವೊಕೇಷನಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ದಖೀರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಭಗೊಂಡಿತು. ವಿಜ್ಞಾನ, ಸಮಾಜಶಾಸ್ತ್ರ, ಗಣಿತ, ವೃತ್ತಿಪರಿಚಯ ಮತ್ತು ಐಟಿ ಮೇಳದ ಮೊದಲ ದಿನ ಉಪಜಿಲ್ಲೆಯ 135 ಶಾಲೆಗಳಿಂದ ಸುಮಾರು 3000 ಸ್ಪರ್ಧಾಳುಗಳು ಭಾಗವಹಿಸಿದ್ದರು. ಐಟಿ ಮತ್ತು ವೃತ್ತಿ ಪರಿಚಯ ಮೇಳ ವಿಭಾಗಗಳಲ್ಲಿ ಸ್ಪರ್ಧೆಗಳು ತಳಂಗರೆ ಮುಸ್ಲಿಂ ವೊಕೇಷನಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಗಣಿತ ಮತ್ತು ವಿಜ್ಞಾನ ವಿಭಾಗದ ಸ್ಪರ್ಧೆಗಳು ದಖೀರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾಸರಗೋಡು ಶಾಸಕ ಎನ್‍ಎ ನೆಲ್ಲಿಕುನ್ನು ಮೇಳದ ಔಪಚಾರಿಕ ಉದ್ಘಾಟನೆ ನೆರವೇರಿಸಿದರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥ ಪೆÇ್ರ. ರಾಜೇಂದ್ರ ಪಿಲಂಗಟ್ಟ ಮುಖ್ಯ ಅತಿಥಿಗಳಾಗಿದ್ದರು. ಜಿ. ಎಂ. ವಿ. ಎಚ್. ಎಸ್. ಎಸ್. ತಳಂಗರೆ ಪಿ. ಟಿ. ಎ. ಅಧ್ಯಕ್ಷ ನೌಫಲ್ ತಾಯಲ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಜಹೀರ್ ಆಸಿಫ್, ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್ ಮೊಂತೆರೊ, ಶಾಲಾ ಪಿ. ಟಿ. ಎ. ಉಪಾಧ್ಯಕ್ಷ ಕೆ. ಎಸ್. ಅಹಮದ್ ಬದರುದ್ದೀನ್, ವಿ. ಎಚ್. ಎಸ್. ಇ. ವಿಭಾಗದ ಪ್ರಭಾರ ಪ್ರಾಂಶುಪಾಲೆ ಟಿ. ಎ. ಸಜಿತಾ, ದಖೀರತ್‍ಆಂಗ್ಲ ಮಾಧ್ಯಮ ಶಾಲಾ ವ್ಯವಸ್ಥಾಪಕ ಅಬ್ದುಲ್ ಲತೀಫ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕಮರುನ್ನೀಸಾ ತಳಂಗರ, ಕಾಸರಗೋಡು ವಿಜ್ಞಾನ ಕ್ಲಬ್ ಕಾರ್ಯದರ್ಶಿ ಆರ್. ವಿ.ಪ್ರೇಮಾನಂದನ್, ಸಂಚಾಲಕ ಪಿ. ಟಿ. ಬೆನ್ನಿ, ಎಂ. ಪಿ. ಶಾಫಿ ಹಾಜಿ ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಪ್ರಧಾನ ಸಂಚಾಲಕ ವಿ. ನಾರಾಯಣನ್ ಕುಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಪಿ. ಡಿ. ಬಿಂದು ವಂದಿಸಿದರು.