ತ್ರಿಶೂರ್: ಆನೆ ಪ್ರಿಯರ ಅಚ್ಚುಮೆಚ್ಚಿನ ಗಂಡಾನೆ ಕುಟ್ಟ್ಟನ್‍ಕುಳಂಗರ ಶ್ರೀನಿವಾಸನ್ ಮೃತಪಟ್ಟಿದೆ. ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅದು ಚಿಕಿತ್ಸೆಯಲ್ಲಿತ್ತು. ನಲವತ್ತು ವರ್ಷ ವಯಸ್ಸಿನದಾಗಿತ್ತು.
ತಮಿಳುನಾಡಿನಲ್ಲಿ ಹುಟ್ಟಿದ ಸಲಗವನ್ನು ಕೇರಳದ ಉತ್ಸವ ಕಾರ್ಯಕ್ರಮಗಳಿಗೆ ಕರೆತಂದ ಬಳಿಕ ಕುಟ್ಟನ್‍ಕುಳಂಗರ ಶ್ರೀನಿವಾಸನ್ ಅಭಿಮಾನಿಗಳ ಆನೆಯಾಗಿ ಮಾರ್ಪಟ್ಟಿತ್ತು. ಶ್ರೀನಿವಾಸನ್ ಎಂಬ ಹೆಸರಿದ್ದ ಈ ಆನೆಯ ವೈಶಿಷ್ಟ್ಯವೆಂದರೆ ವಿಶಾಲವಾದ ಕೊಂಬು.
1991 ರಲ್ಲಿ ತ್ರಿಶೂರ್ ಪೂಂಕುನ್ನಂ ಶ್ರೀ ಕುಟ್ಟಂಕುಳಂಗರ ಮಹಾ ವಿಷ್ಣು ದೇವಸ್ಥಾನದಲ್ಲಿ ಮೊದಲ ಬಾರಿಗೆ ಕತೆತರಲಾಗಿತ್ತು. ಕುಟ್ಟಂಕುಳಂಗರ ಶ್ರೀನಿವಾಸನ್ ತನ್ನ ಅದ್ಭುತ ನೋಟ ಮತ್ತು ದಂತಗಳ ಬೆಳವಣಿಗೆಯಿಂದ ಅಭಿಮಾನಿಗಳ ಮನಗೆದ್ದಿದ್ದ ಸಲಗವಾಗಿ ಗಮನ ಸೆಳೆದಿತ್ತು.