ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡ್ಯಮೆ ಮಿಲ್ ರೋಡ್ ನಿವಾಸಿ ಮೊಯ್ದೀನ್-ಖದೀಜಾ ದಂಪತಿ ಪುತ್ರ ಮುನವರ್ ಖಾಸಿಂ(28)ಮನೆಯೊಳಗೆ ನೇಣು ಬಿಗಿದುಕೊಂಡಿದ್ದು, ಮನೆಯಲ್ಲಿದ್ದವರು, ಇವರನ್ನು ತಕ್ಷಣ ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಿರಲಿಲ್ಲ. ಆಟೋ ಚಾಲಕನಾಗಿದ್ದ ಮುನವರ್ ಖಾಸಿಂ ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಲ ನಿವಾಸಿ ಶಾನವಾಸ್ ಯಾನೆ ಶಾನು ಎಂಬಾತನನ್ನು 2019ರಲ್ಲಿ ಕೊಲೆಗೈದು ಮೃತದೇಹ ಪಾಳುಬಾವಿಗೆ ಎಸೆದ ಪ್ರಕರಣದಲ್ಲಿ ಆರೋಪಿಯಾಗಿದ್ದನು.
ಶಾನು ಕೊಲೆ ಪ್ರಕರಣದಲ್ಲಿ ಮುನವರ್ ಖಾಸಿಂನನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಆರೋಪಿಯನ್ನಾಗಿಸಿದ್ದು, ನಂತರದ ದಿನಗಳಲ್ಲಿ ಮಾನಸಿಕ ಖಿನ್ನತೆಗೊಳಗಾಗಿದ್ದನು. ಇದೇ ಚಿಂತೆಯಲ್ಲಿ ಆತ್ಮಹತ್ಯೆಗೆ ಶರನಾಗಿರುವುದಾಗಿ ತಂದೆ ಮೊಯ್ದೀನ್ ಆರೋಪಿಸಿದ್ದಾರೆ.